

ಕೋಟ: ಇಲ್ಲಿನ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ರಸ್ತೆ ಇದೇ ಮೊದಲ ಬಾರಿಗೆ ಭಾರಿ ಮಳೆಗೆ ಹೊಳೆಯಾಂತಾಗಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ವ್ಯತ್ಯಯವಾಯಿತು.
ಗುರುವಾರ ಸುರಿದ ಮಳೆಗೆ 200 ಮೀಟರ್ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು.
ಸ್ಥಳೀಯಾಡಳಿತ ಮಳೆಗಾಲಕ್ಕೆ ಪೂರ್ವತಯಾರಿ ನಡೆಸದಿರುವುದೇ ಸಮಸ್ಯೆಗೆ ಕಾರಣ. ಹೊಸ ಕಟ್ಟಡ ಕಟ್ಟುವರು ಆವರಣಗೋಡೆ ನಿರ್ಮಿಸಿಕೊಂಡು ನೀರು ಸರಾಗವಾಗಿ ಹರಿಯಲು ತಡೆಯಾಗುತ್ತಿದೆ. ಚರಂಡಿಗಳಲ್ಲಿ ಹೂಳು ತೆರವು ಮಾಡದೆ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ.