More

  VIDEO| ಕೆಂಪು-ಹಳದಿ ಬಣ್ಣದ ದಾರ ಕಟ್ಟಿದ ವಿದ್ಯಾರ್ಥಿಗಳು ಅಮಾನತು!

  ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕೈಗೆ ಕಟ್ಟಿದ್ದ ದೇವರ ದಾರವನ್ನು ಕತ್ತರಿಸಿದ್ದಾರೆ ಮತ್ತು ಅಮಾನತು ಮಾಡಿರುವ ಆರೋಪ ಕೇಳಿ ಬಂದಿದೆ.

  ಇನ್ನು ಈ ಕುರಿತು ವಿದ್ಯಾರ್ಥಿಗಳು ಆರೋಪ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

  ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ದೆಹಲಿಯ ವನಸ್ಥಲಿ ಪಬ್ಲಿಕ್​ ಶಾಲೆಯ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಇದ್ದ ದೇವರ ದಾರವನ್ನು ಕತ್ತರಿಸಿದ್ದಾರೆ. ಜೈ ಶ್ರೀರಾಮ್​ ಎಂದು ಬರೆದಿರುವ ಪೋಸ್ಟರ್​ಅನ್ನು ಸಹ ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

  ಸತ್ಯಕ್ಕೆ ದೂರವಾದದ್ದು

  ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಲ ಆರೋಪವನ್ನು ನಿರಾಕರಿಸಿದ್ದು ಈ ಕುರಿತು ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಯಾವುದೇ ತರಹದ ದೂರು ದಾಖಲಾಗಿಲ್ಲ ಎಂದು ತಿಳಿಸಿದೆ. ಘಟನೆಯ ಕುರಿತು ಶಾಲಾ ಆಡಳಿತ ಮಂಡಳಿ ದೂರನ್ನು ದಾಖಲಿಸಿದೆ.

  ಈ ಕುರಿತು ಪ್ರತಿಕ್ರಿಯಿಸಿರುವ ಘಾಜಿಪುರ್​ ಪೊಲೀಸ್​ ಠಾಣಾಧಿಕಾರಿ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಪೂರ್ಣಗೊಂಡ ಬಳಿಕ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts