VIDEO| ನದಿ ಅಂಚಿನಲ್ಲಿ ಬಡಿದಾಡಿಕೊಂಡ ಸ್ಪರ್ಧಾಳುಗಳು!

River Rage
Published on

ರಿಷಿಕೇಶ: ರಿವರ್​ ರಾಫ್ಟಿಂಗ್ ಸ್ಪರ್ಧೆ​ ವೇಳೆ ಉಭಯ ತಂಡಗಳ ನಡುವೆ ಹೊಡೆದಾಟ ಸಂಭವಿಸಿರುವ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಹೊಡೆದಾಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ವಿಡಿಯೋ ವೈರಲ್​

ಪ್ರತಿವರ್ಷ ಉತ್ತರಾಖಂಡದ ರಿಷಿಕೇಶದಲ್ಲಿ ರಿವರ್​ ರಾಫ್ಟಿಂಗ್​ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ದೇಶದ ವಿವಿಧೆಡೆಯಿಂದ ಸ್ಪರ್ಧಿಗಳು ಆಗಮಿಸುತ್ತಾರೆ.

ಗಂಗಾ ನದಿಯ ಶಿವಪುರಿ ಕಡೆಯಿಂದ ಬಂದು ಮುನಿಕಿರೆಟಿಯ ಕಡೆಗೆ ಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು ಉಭಯ ತಂಡದ ಸದಸ್ಯರು ರಾಫ್ಟಿಂಗ್​ ಪ್ಯಾಡ್​ಗಳಿಂದ ಬಡಿದಾಡಿಕೊಂಡಿದ್ದಾರೆ.

ಮುಳುಗಿ ಹೋಗುತ್ತೇವೆ

ಈ ವೇಳೆ ತಂಡದ ಸದಸ್ಯರೊಬ್ಬರು ದೋಣಿಯನ್ನು ಬದಿಗೆ ನಿಲ್ಲಿಸಿ ಇಲ್ಲವಾದಲ್ಲಿ ನಾವೆಲ್ಲರೂ ಮುಳುಗಿ ಹೋಗುತ್ತೇವೆ ಎಂದು ಕೂಗಿಕೊಳ್ಳುತ್ತಿರುವುದನ್ನು ನಾವು ವಿಡಿಯೋ ದಲ್ಲಿ ಕೇಳಬಹುದಾಗಿದೆ.

ಘಟನೆಯ ಕುರಿತು ಪೊಲೀಸ್​ ಅಧಿಕಾರಿಗಳು ಹಾಗೂ ಸ್ಪರ್ಧೆಯ ಆಯೋಜಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net