More

    ChaiGPT; ಸಖತ್​ ವೈರಲ್​ ಆಗುತ್ತಿದೆ ಚಹಾ ಅಂಗಡಿಯ ಹೆಸರು!

    ಬೆಂಗಳೂರು: ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ಕಪ್​ ಬಿಸಿ ಬಿಸಿ ಚಹಾ ಸಿಕ್ಕರೆ ಅದುವೆ ಖುಷಿಯಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಚಹಾ ಕುಡಿಯುವುದು ಹಲವಾರು ಜನರಿಗೆ ಅಭ್ಯಾಸ ಆಗಿಬಿಟ್ಟರುತ್ತದೆ. 

    ತೀ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾ.

    ChatGPT ರೀತಿ ChaiGPT

    ಪ್ರತಿದಿನ ನೆಟ್ಟಿಗರು ಒಂದಿಲ್ಲೊಂದು ವಿಷಯಗಳನ್ನು ಕಂಡು ಹಿಡಿಯುವ ಮೂಲಕ ಹೊಸ ವಿಚಾರಗಳಿಗೆ ತಂತ್ರಜ್ಞಾನದ ಮೂಲಕ ನಾಂದಿ ಹಾಡುತ್ತಿದ್ದಾರೆ.

    ಇನ್ನು ವಿಚಾರ ಏನೆಂದರೆ ಇದರ ಸಹಾಯದೊಂದಿಗೆ ವ್ಯಾಪರಿಗಳು ತಮ್ಮತ್ತ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ChatGPT ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿದೆ ಅದೇ ರೀತಿ ಇದೀಗ ChaiGPT ಎಂಬ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ.

    ಟ್ವಿಟರ್ ಬಳಕೆದಾರರಾದ ಸ್ವಟ್​ಕಟ್​ ಎಂಬುವವರು ಈ ಫೋಟೋವನ್ನು ಹಂಚಿಕೊಂಡಿದ್ದು ವಿಶಿಷ್ಟವಾದ ಅಡಿಬರಹವನ್ನು ನೀಡಿದ್ದಾರೆ ಮತ್ತು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.

    ನೆಟ್ಟಿಗರು ಈ ಫೋಟೋಗೆ ಭಿನ್ನ-ವಿಭಿನ್ನವಾಗಿ ಕಮೆಂಟ್​ ಮಾಡುತ್ತಿದ್ದು ಹೊಸದಾಗಿ ಉದ್ಯಮ ಶುರು ಮಾಡುವವರಿಗೆ ವಿನೂತನ ಹೆಸರಲಿಡಲು ಪ್ರೇರಣೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts