ಸಿನಿಮಾ

ನೂತನ ಸಿಎಂ ಪದಗ್ರಹಣ; ಉಳುಕಿತು ಸಮಾರಂಭಕ್ಕೆ ಬಂದಿದ್ದ ನಟ ಶಿವರಾಜ್​ಕುಮಾರ್​ ಕಾಲು

ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಸಿಎಂ ಹಾಗೂ ಡಿಸಿಎಂ ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರ ರಾಜಕಾರಣದ ಅನೇಕ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಟಾರ್ ನಟರಾದ ಶಿವರಾಜ್​ಕುಮಾರ್​​, ಉಮಾಶ್ರೀ, ದುನಿಯಾ ವಿಜಯ್​, ಕಮಲ್​ ಹಾಸನ್​​, ಸಾಧು ಕೋಕಿಲಾ, ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು, ಮಾಜಿ ಸಂಸದೆ ರಮ್ಯಾ ಹಾಗೂ ನಿಶ್ವಿಕಾ ನಾಯ್ಡು ಭಾಗವಹಿಸುವ ಮೂಲಕ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದರು.

ಕಾಲಿಗೆ ಪೆಟ್ಟು

ಇನ್ನು ಕಾರ್ಯಕ್ರಮ ಮಗಿಸಿಕೊಂಡು ವಾಪಸ್​ ತೆರಳುವ ವೇಳೆ ನಟ ಶಿವರಾಜ್​ಕುಮಾರ್​ ಕಾಲಿಗೆ ಪೆಟ್ಟಾಗಿದ್ದು ಪತ್ನಿಯ ಸಹಾಯದೊಂದಿಗೆ ವಾಪಸ್​ ತೆರಳಿದ್ದಾರೆ ಎಂದು ವರದಿಯಾಗಿದೆ.

Stars

ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿಕ ಶಿವರಾಜ್​ಕುಮಾರ್​ ತಮ್ಮ ಪತ್ನಿ ಗೀತಾ ಜೊತೆ ವಾಪಸ್​ ಆಗುವ ವೇಳೆ ಮೆಟ್ಟಿಲುಗಳನ್ನು ಇಳಿಯುವ ಸಂದರ್ಭದಲ್ಲಿ ಕಾಲು ಜಾರಿದ ಪರಿಣಾಮ ಉಳುಕಿದೆ ಎಂದು ತಿಳಿದು ಬಂದಿದೆ.

ತಾರಾ ಮೆರಗು

ಪ್ರಮಾಣ ವಚನದಲ್ಲಿ ಭಾಗಿಯಾಗಿದ್ದ ಶಿವರಾಜ್​ಕುಮಾರ್​, ದುನಿಯಾ ವಿಜಯ್, ಸಾಧುಕೋಕಿಲಾ, ನಿಶ್ವಿಕಾ ನಾಯ್ಡು, ರಮ್ಯಾ ಕಾಂಗ್ರೆಸ್​ ಪಕ್ಷದ ಪರ ರಾಜ್ಯದ್ಯಂತ ಪ್ರವಾಸ ಮಾಡಿದ್ದರು. ಕೆಲವು ಸಿಎಂ ಸಿದ್ದರಾಮಯ್ಯ ಪರ ಕಾಣಿಸಿಕೊಂಡರೆ ಇನ್ನು ಕೆಲವರು ಕಾಂಗ್ರೆಸ್​ ಅಭ್ಯರ್ಥಿಗಳ ಪರ ಮತಯಾಚಿಸಿದ್ದರು.

ಶನಿವಾರ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಟ ಕಮಲ್​ ಹಾಸನ್​ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಹಿಂದೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ನಟ ತಮ್ಮ ಬೆಂಬಲವನ್ನು ಸೂಚಿಸಿದ್ದರು.

Kamal Hassan

Latest Posts

ಲೈಫ್‌ಸ್ಟೈಲ್