VIDEO| ಕೊಹ್ಲಿ ಕೊಹ್ಲಿ... ಎಂದು ಛೇಡಿಸಿದ ಜನಸಮೂಹ; ಸನ್ನೆ ಮಾಡಿ ಪೇಚಿಗೆ ಸಿಲುಕಿದ ಆಟಗಾರ

Naveen ul haq
Published on

ಕೊಲ್ಕತ್ತ: ಹಾಲಿ ಐಪಿಎಲ್​ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಮೇ 01ರಂದು ಲಖನೌ ಹಾಗೂ ಬೆಂಗಳೂರು ನಡುವೆ ನಡೆದಿದ್ದ ಐಪಿಎಲ್​ ಪಂದ್ಯ ಮುಗಿದ್ದು 15ದಿನಗಳು ಕಳೆದರೂ ಸಹ ಅದರ ಬಿಸಿ ಇನ್ನು ಆರಿರುವಂತೆ ಕಾಣುತ್ತಿಲ್ಲ.

ಮಾತಿನ ಚಕಮಕಿ

ಮೇ 01ರಂದು ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಟಾರ್​ ಬ್ಯಾಟ್ಸ್​ಮ್ಯಾನ್ ವಿರಾಟ್​ ಕೊಹ್ಲಿ ಹಾಗೂ ಲಖನೌ ತಂಡದ ಆಟಗಾರರಾದ ನವೀನ್​-ಉಲ್​-ಹಕ್​, ಕೈಲ್​​ ಮೇಯರ್ಸ್​ ನಡುವೆ ಪಂದ್ಯ ಮುಗಿದ ಬಳಿಕ ಮಾತಿನ ಚಕಮಕಿ ಏರ್ಪಟ್ಟಿತ್ತು.

ಇದಾದ ಬಳಿಕ ಸಾಮಾಜಿಕ ಜಾಲತಾನಗಳಲ್ಲಿ ನವೀನ್​ ಹಾಗೂ ವಿರಾಟ್​ ಟೀಕೆ-ಟಿಪ್ಪಣಿಗಳ ಮೂಲಕ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದಿದ್ದರು.

ಸುಮ್ಮನಿರುವಂತೆ ಸನ್ನೆ

ಇದೀಗ ಹೊಸ ಘಟನೆಯೊಂದರಲ್ಲಿ ಶನಿವಾರ ಕೊಲ್ಕತ್ತಾ ನೈಟ್​ರೈಡರ್ಸ್​ ಹಾಗೂ ಲಖನೌ ಸೂಪರ್​ಜೈಂಟ್ಸ್​ ನಡುವೆ ನಡೆದ ಪಂದ್ಯದ ವೇಳೆ ಅಫ್ಘಾನಿಸ್ತಾನ ಮೂಲದ ಆಟಗಾರರನ್ನು ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುವ ಮೂಲಕ ಛೇಡಿಸಿದ್ದಾರೆ.

ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ನವೀನ್​-ಉಲ್​-ಹಕ್​ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಮಾಡುವ ವೇಳೆ ಪ್ರೇಕ್ಷಕರು ಕೊಹ್ಲಿ ಕೊಹ್ಲಿ ಎಂದು ಕೂಗಿದ್ದು ಈ ವೇಳೆ ಆಟಗಾರ ಸುಮ್ಮನಿರುವಂತೆ ಸೂಚಿಸುತ್ತಿರುವುದು ಕಂಡು ಬರುತ್ತದೆ.

ಸದ್ಯ ಈ ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ಭಿನ್ನ-ವಿಭಿನ್ನ ಕಮೆಂಟ್​ಗಳ ಮೂಲಕ ತಮ್ಮ ನೆಚ್ಚಿನ ಆಟಗಾರರನ ಪರ ನಿಲ್ಲುತ್ತಿದ್ದಾರೆ ಮತ್ತು ಈ ವಿಡಿಯೋ ಉಭಯ ಆಟಗಾರರ ನಡುವಿನ ತಾರಕಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net