

Wasim Akram: ಇದೇ ಸೆ.09ರಿಂದ ಏಷ್ಯಾಕಪ್ ಟಿ20 ಟೂರ್ನಿ ದುಬೈನಲ್ಲಿ ಆರಂಭಗೊಂಡಿದ್ದು, ಇಂದು ಟೀಮ್ ಇಂಡಿಯಾ ಮತ್ತು ಯುಎಇ ನಡುವೆ ಪಂದ್ಯ ನಡೆಯಲಿದೆ. ಇದು ಭಾರತಕ್ಕೆ ಮೊದಲ ಪಂದ್ಯವಾಗಿದ್ದು, ಕ್ರಿಕೆಟ್ ಪ್ರೇಮಿಗಳ ಕುತೂಹಲ ದುಪ್ಪಟ್ಟಾಗಿದೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಂ ಮಾತನಾಡಿ, ಏಷ್ಯಾಕಪ್ನಿಂದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ರನ್ನು ಕೈಬಿಟ್ಟಿದ್ದೇಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯಿಂದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ಗಳನ್ನೇ ಕೈಬಿಟ್ಟ ಪಿಸಿಬಿ ನಿಲುವು ಇಂದಿಗೂ ಹಲವರಲ್ಲಿ ಗೊಂದಲ ಹುಟ್ಟುಹಾಕಿದೆ. ಇದಕ್ಕೆ ಕಾರಣ, ಬಾಬರ್ ಮತ್ತು ರಿಜ್ವಾನ್ ಇಬ್ಬರೂ ಸಹ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳು. ಹೀಗಿರುವಾಗಲೇ, ಈ ಆಟಗಾರರನ್ನು ಬಿಟ್ಟು ಉಳಿದವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರ ಕುರಿತು ಪ್ರಶ್ನೆಗಳು ಮೂಡಿತ್ತು. ಕಡೆಗೂ ಇದಕ್ಕೆ ವಾಸಿಮ್ ತಮ್ಮ ಶೈಲಿಯಲ್ಲೇ ಉತ್ತರಿಸಿದ್ದಾರೆ.
"ನನ್ನ ಪ್ರಕಾರ, ಪ್ರಸ್ತುತ ಪಾಕ್ ತಂಡ ಚೆನ್ನಾಗಿದೆ. ಬಾಬರ್ ಮತ್ತು ರಿಜ್ವಾನ್ಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಕೊಡಲಾಗಿದೆ. ಅದು ತಂಡದ ಓಪನಿಂಗ್ ಬ್ಯಾಟರ್ಗಳಾಗಿ. ಚೆನ್ನಾಗಿಯೇ ಪ್ರದರ್ಶನ ತೋರಿದ್ದಾರೆ. ಆದರೆ, ನಾವಂದುಕೊಂಡಂತಲ್ಲ ಮತ್ತು ಸ್ಥಿರತೆ ಕಾಪಾಡಿಕೊಳ್ಳಲಿಲ್ಲ. ಇವರಿಬ್ಬರನ್ನು ಬಿಟ್ಟು ತಂಡವನ್ನು ರೂಪಿಸಿರುವುದು ಒಂದು ರೀತಿಯಲ್ಲಿ ಮುಂದೆ ಹೋದಂತೆ. ಸಲ್ಮಾನ್ ಆಗಾ ತಂಡಕ್ಕೆ ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ" ಎಂದು ಅಕ್ರಂ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).