

Dental pain: ಮೊದಲಿನಿಂದಲೂ ಹಲ್ಲು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿ ಕಾಡುವಂತಹ ಕಾಯಿಲೆಯಾಗಿದೆ. ನಮ್ಮಲ್ಲಿ ಇದು ಹಲವಾರು ಕಾರಣಗಳಿಂದ ಉಂಟಾಗಬಹುದು, ಉದಾಹರಣೆಗೆ ಹಲ್ಲಿನ ಕೊಳೆತ, ಒಸಡಿನ ರೋಗ, ಅಥವಾ ಗಾಯ. ಈ ರೀತಿ ಸಮಸ್ಯೆಗಳಿಂದಲೂ ಬರುತ್ತದೆ. ಹಾಗೇ ತೀವ್ರವಾದ ಹಲ್ಲು ನೋವಿಗೆ ದಂತ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾದರೂ, ಕೆಲವು ಮನೆಮದ್ದುಗಳು ತಾತ್ಕಾಲಿಕ ರೀತಿಯಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಈ ಮನೆಮದ್ದುಗಳು ನಿಮ್ಮ ಹಲ್ಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಉಪ್ಪು ನೀರು ಹಲ್ಲು ನೋವಿಗೆ ಅತ್ಯಂತ ಸರಳವಾದ ಮನೆಮದ್ದು. ಯಾವುದೇ ವ್ಯಕ್ತಿಗೆ ಹಲ್ಲು ನೋವು ಪ್ರಾರಂಭವಾದ ತಕ್ಷಣವೇ ಮೊದಲು ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ನಂತರ ಈ ದ್ರಾವಣದಿಂದ ಬಾಯನ್ನು 30 ಸೆಕೆಂಡುಗಳ ಕಾಲ ಮುಕ್ಕಳಿಸಿ, ನಂತರ ಉಗುಳಿರಿ. ಉಪ್ಪು ಬ್ಯಾಕ್ಟೀರಿಯಾ-ನಿರೋಧಕಗಳನ್ನು ಹೊಂದಿರುವುದರಿಂದ ಇದು ಒಸಡಿನ ಊತ ಮತ್ತು ಸೋಂಕನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಎರಡು-ಮೂರು ಬಾರಿ ಇದನ್ನು ಮಾಡುವುದರಿಂದ ನೋವಿನ ತೀವ್ರತೆ ಕಡಿಮೆಯಾಗುತ್ತದೆ.
ಲವಂಗದ ಎಣ್ಣೆಯು ಯೂಜಿನಾಲ್ ಎಂಬ ನೈಸರ್ಗಿಕ ನೋವು ನಿವಾರಕವನ್ನು ಹೊಂದಿದೆ. ಯಾವುದೇ ವ್ಯಕ್ತಿ ಹಲ್ಲು ನೋವಿನಿಂದ ಬಳಲುತ್ತಿದ್ದರೆ ಮೊದಲು ಲವಂಗದ ಎಣ್ಣೆಯನ್ನು ನೋವಿರುವ ಹಲ್ಲಿನ ಮೇಲೆ ಹಚ್ಚಿ. ನಮತರ 15 ನಿಮಿಷಗಳನ್ನು ಬಿಟ್ಟು ಬಾಯನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಎಣ್ಣೆಯನ್ನು ಒಸುಡಿಗೆ ನೇರವಾಗಿ ಹಚ್ಚಬೇಡಿ. ಏಕೆಂದರೆ ಇದು ಚರ್ಮಕ್ಕೆ ಕಿರಿಕಿರಿ ಉಂಟುಮಾಡುತ್ತದೆ.
ಹಲ್ಲು ನೋವು ಕಾಣಿಸಿಕೊಂಡ ತಕ್ಷಣ ಐಸ್ಕ್ಯೂಬ್ಗಳನ್ನು ತೆಗೆದುಕೊಂಡು ಒಂದು ಶುದ್ಧ ಬಟ್ಟೆಯಲ್ಲಿ ಕಟ್ಟಿ ನೋವಿನ ಹೊರಭಾಗದಲ್ಲಿ 10-15 ನಿಮಿಷ ಇಡಿ. ಇದು ನೋವನ್ನು ಶಮನ ಮಾಡಿ ಊತವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
ಅರಿಶಿನವು ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಒಂದು ಚಿಟಿಕೆ ಅರಿಶಿನ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ, ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನ್ನು ನೋವಿರುವ ಹಲ್ಲಿಗೆ ಅಥವಾ ಒಸಡಿಗೆ ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಸೋಂಕನ್ನು ತಡೆಗಟ್ಟಿ, ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವುದರಿಂದ ಇದು ಸೋಂಕಿನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಬೆಳ್ಳುಳ್ಳಿ ಕಾಯಿಯನ್ನು ಜಜ್ಜಿ, ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ, ನೋವಿರುವ ಭಾಗಕ್ಕೆ ಹಚ್ಚಿರಿ. 5-10 ನಿಮಿಷ ಬಿಟ್ಟು ಬಾಯಿಯನ್ನು ಶುದ್ಧ ನೀರಿನಿಂದ ತೊಳೆಯಿರಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ