ಅಮಿತ್ ಷಾಗೆ ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಸ್ವಾಗತ!; ಕಾರಣವೇನು ಗೊತ್ತಾ?

Washing powder Nirma’ posters welcome Amit Shah in Hyderabad
Published on

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಷಾ ಹೈದರಾಬಾದ್​​ಗೆ ಭೇಟಿ ನೀಡಿದ್ದಾರೆ, ಈ ವೇಳೆ ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​​) ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್  ಮೂಲಕ ಸ್ವಾಗತಿಸಿದೆ.

ಸಿಐಎಸ್‌ಎಫ್ ರೈಸಿಂಗ್ ಡೇ ಪರೇಡ್​​ನಲ್ಲಿ ಅಮಿತ್ ಷಾ ಭಾಗವಹಿಸಲಿದ್ದು, ನಿರ್ಮಾ ಜಾಹಿರಾತಿನ ಪೋಸ್ಟರ್​​ನಲ್ಲಿ ಬಿಜೆಪಿ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಫೋಟೋಗಳು ಕಂಡುಬಂದಿವೆ.

ನಿರ್ಮ ಜಾಹಿರಾತಿನಲ್ಲಿರುವ ಬಾಲಕಿಯ ಫೋಟೋಗೆ ಮೇಲೆ ಉಲ್ಲೇಖಿಸಿರುವ ಬಿಜೆಪಿ ನಾಯಕರ ಫೋಟೋ ಜೋಡಿಸಲಾಗಿದ್ದು, ಈ ನಾಯಕರೆಲ್ಲರೂ ಬಿಜೆಪಿ ಸೇರಿದ ಮೇಲೆ ಭ್ರಷ್ಟಾಚಾರ ಮುಕ್ತರಾಗಿದ್ದಾರೆ ಎಂದು ಬಿಆರ್ ಎಸ್ ವ್ಯಂಗ್ಯವಾಡಿದೆ. ಈ ರೀತಿಯ ಪೋಸ್ಟರ್ ಹಾಕುವ ಮೂಲಕ ಅಮಿತ್ ಷಾ ಅವರನ್ನು ಬಿಆರ್ ಎಸ್ ಸ್ವಾಗತಿಸಿದೆ.

ಬಿಜೆಪಿ ನಾಯಕರನ್ನೊಳಗೊಂಡ ವಾಷಿಂಗ್ ಪೌಡರ್ ಬ್ರಾಂಡ್ ನ ಮತ್ತೊಂದು ಪೋಸ್ಟರ್ ಹಾಕಿದ್ದು, ಅದರಲ್ಲಿ ಹಿಮಂತ ಬಿಸ್ವ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಟೈಡ್ ಡಿಟರ್ಜೆಂಟ್ ನ ಮಾದರಿಯ ಜಾಹಿರಾತಿನಲ್ಲಿ ಎಷ್ಟೇ ರೈಡ್​​ಗಳಾದರೂ ತೆಲಂಗಾಣ ಸಿಎಂ ಪುತ್ರಿ ಕವಿತಾ ಅವರ ಬಣ್ಣ ಬದಲಾಗಿಲ್ಲ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net