

ಹಾಸನ: ಸುಮಲತಾ ಅಂಬರೀಶ್ ಅವರು ಬಹಳ ದೊಡ್ಡವರಿದ್ದಾರೆ. ಹೀಗಾಗಿ ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ. ಈ ವಿಚಾರವಾಗಿ ಮಂಡ್ಯ ಜನತೆ ತೀರ್ಮಾನ ಮಾಡಿಕೊಳ್ಳುತ್ತಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕವಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹಾಸನ ಜಿಲ್ಲೆ ಬೇಲೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್ಡಿಕೆ ಅವರು, ಮಂಡ್ಯ ಸಂಸದೆ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವುದು ಅಚ್ಚರಿಯಾದ ಸುದ್ದಿ ಏನು ಅಲ್ಲ. ಈ ವಿಷಯ ಯಾರಿಗೇನು ಅಚ್ಚರಿ ಮೂಡಿಸುವ ಸುದ್ದಿ ಅಲ್ಲ.ಇದಕ್ಕೆ ಪ್ರಾಮುಖ್ಯತೆ ನಾವೇನು ಕೊಡಬೇಕಾಗಿರುವ ಅವಶ್ಯಕತೆ ಇಲ್ಲಾ ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳುವ ಮೂಲಕವಾಗಿ ವ್ಯಂಗ್ಯವಾಡಿದ್ದಾರೆ.
ಅವರು ಏನ್ ಮಾತನಾಡಿದ್ದಾರೆ ಅದಕ್ಕೆ ರಿಯಾಕ್ಷನ್ ಕೊಡೋದು ಸೂಕ್ತ ಅಲ್ಲ ಅನ್ನೋದು ನನ್ನ ಅಭಿಪ್ರಾಯವಾಗಿದೆ. ಇದಕ್ಕೆ ನನಗೇನು ಸಂಬಂಧವಿಲ್ಲ, ಅವರು ದೊಡ್ಡಮಟ್ಟಕ್ಕೆ ಬೆಳೆದಿರುವಂತಹವರು. ದೊಡ್ಡ ಪಕ್ಷಕ್ಕೆ ಬೇರೆ ಸೇರ್ತಿದ್ದಾರೆ, ನಾನೊಬ್ಬ ಸಣ್ಣವನಾಗಿದ್ದೇನೆ. ಅವರ ಬಗ್ಗೆ ಮಾತನಾಡಲು ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ.