More

    VIDEO| ಪಾನಿಪುರಿ ಮಾರಾಟ ಮಾಡುವ BTech ಪದವೀಧರೆ; ಇಲ್ಲಿದೆ ನೋಡಿ ಸ್ಫೂರ್ತಿದಾಯಕ ಕಥೆ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್ ಅಪ್​ಗಳ ಸಂಖ್ಯೆ ಹೆಚ್ಚಿದೆ. ಕೆಲವರಂತೂ ಎಳೆಯ ಪ್ರಾಯದಲ್ಲೇ ಸ್ವಂತ ಉದ್ಯಮ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಆದರೆ ಇಲ್ಲೊಬ್ಬಳು ಬಿ.ಟೆಕ್ ಪದವಿ ಪಡೆದ ಯುವತಿ ಪಾನಿಪುರಿ ಮಾರಾಟ ಮಾಡುವ ಮೂಲಕವಾಗಿ ನಿರುದ್ಯೋಗಿಗಳಿಗೆ ಸ್ಫೂರ್ತಿಯಾಗಿದ್ದಾರೆ.

    ದೆಹಲಿಯ ನಿವಾಸಿ ತಾಪ್ಸಿ ಉಪಾಧ್ಯಾಯ ಬಿ.ಟೆಕ್​​ ಪದವಿ ಪಡೆದಿದ್ದಾರೆ. ಪದವಿ ಮುಗಿಯುತ್ತಿದ್ದಂತೆ ಎಲ್ಲರಂತೆ ಉದ್ಯೋಗಕ್ಕಾಗಿ ಕಂಪನಿಯಿಂದ ಕಂಪನಿಗೆ ಅಲೆದಾಟ ನಡೆಸಲಿಲ್ಲ. ಈ ಈಕೆ ಸ್ವಂತ ಉದ್ಯಮ ಪ್ರಾರಂಭಿಸುವ ನಿರ್ಧಾರ ಕೈಗೊಂಡು ಪಾನಿಪುರಿ ಅಂಗಡಿ ಪ್ರಾರಂಭಿಸಿದರು. ಬುಲೆಟ್ ಮೇಲೇರಿ ಅದಕ್ಕೆ ಪಾನಿಪುರಿ ಗಾಡಿಯನ್ನು ಜೋಡಿಸಿಕೊಂಡು ದೆಹಲಿಯ ಜೈಲ್ ರೋಡ್ ಮೆಟ್ರೋ ಸ್ಟೇಷನ್ ಬಳಿ ತನ್ನ ವ್ಯಾಪಾರ ಪ್ರಾರಂಭಿಸಿಯೇ ಬಿಟ್ಟಳು.

    ಇದನ್ನೂ ಓದಿ: ಈಜುಕೊಳದಲ್ಲಿ ಮಹಿಳೆಯರಿಗೆ ಟಾಪ್‌ಲೆಸ್ ಆಗಿ ಈಜಾಡಲು ಅನುಮತಿ ನೀಡಿದ ಬರ್ಲಿನ್!

    ಹಲವರು ಈ ಕಾರಣಕ್ಕೆ ತಾಪ್ಸಿ ಅವರನ್ನು ಗೇಲಿ ಕೂಡ ಮಾಡಿರಬಹುದು. ಕೇವಲ 21 ವರ್ಷದ ತಾಪ್ಸಿ ಉಪಾಧ್ಯಾಯ ಎಂಬ ಈ ಹುಡುಗಿ ಇಂದು ದೆಹಲಿಯಲ್ಲಿ ಬಿ.ಟೆಕ್ ಪಾನಿಪುರಿವಾಲಿ ಎಂದೇ ಜನಪ್ರಿಯತೆ ಗಳಿಸಿದ್ದಾಳೆ.

    ತಾಪ್ಸಿ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಉದ್ಯೋಗ ಸಿಕ್ಕಿಲ್ಲ ಎಂದು ಬರಿಗೈಲಿ ಕುಳಿತಿರುವ ಅದೆಷ್ಟೋ ಯುವಕ, ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸ್ಫೂರ್ತಿಯಾಗಿದ್ದಾರೆ. ಈ ಸ್ಟಾಲ್ ನಲ್ಲಿ ಇನ್ನಷ್ಟು ಸ್ಟ್ರೀಟ್ ಫುಡ್ ಗಳನ್ನು ಪರಿಚಯಿಸುವ ಬಯಕೆ ಹೊಂದಿದ್ದು, ಆ ಮೂಲಕ ಜನರಿಗೆ ಆರೋಗ್ಯಕರ ಸ್ಟ್ರೀಟ್ ಫುಡ್ ಒದಗಿಸುವ ಉದ್ದೇಶ ಹೊಂದಿದ್ದಾರೆ.

     

    View this post on Instagram

     

    A post shared by Are you hungry (@are_you_hungry007)

     

    ಗುಡಿಸಲು ಸುಟ್ಟು ಭಸ್ಮ; ಮಲಗಿದ್ದಲ್ಲೇ ಸಜೀವ ದಹನವಾದ ಒಂದೇ ಕುಟುಂಬದ ಐದು ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts