

Malaika Arora: ಬಾಲಿವುಡ್ನ ಅತ್ಯಂತ ಫಿಟ್ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಮಲೈಕಾ ಅರೋರ ಫಿಟ್ನೆಸ್ ಉತ್ಸಾಹಿ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ. ಅವರು ಇತ್ತೀಚೆಗೆ ಕಾಲುಗಳ ಮತ್ತು ಪೃಷ್ಠವನ್ನು ಬಲಪಡಿಸುವುದರ ಜೊತೆಗೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ವ್ಯಾಯಾಮಗಳನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಸ್ಕ್ವಾಟ್ ಒಂದು ಸರಳ ವ್ಯಾಯಾಮ. ಆದರೆ, ಇದು ಹೆಚ್ಚು ಪರಿಣಾಮ ಬೀರುವಂತಹ ವ್ಯಾಯಾಮವಾಗಿದೆ. ಇದು ಕೆಳ ದೇಹವನ್ನು ಬಲಪಡಿಸಲು ಮತ್ತು ನಿಮ್ಮ ಸ್ನಾಯುಗಳನ್ನು ಟೋನ್ ಮಾಡಲು ಉತ್ತಮವಾಗಿದೆ. ನೀವು ಕುಳಿತುಕೊಳ್ಳುವಾಗ ಮತ್ತು ಎದ್ದು ನಿಲ್ಲುವಾಗ ಒಳಗಿನ ತೊಡೆಯ ಸ್ನಾಯುಗಳನ್ನು ಹೆಚ್ಚು ತೊಡಗಿಸಿಕೊಳ್ಳಲು ವಿಶಾಲವಾದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಇದು ಒಳಗೊಂಡಿರುತ್ತದೆ. ಹಾಗೆಯೇ ಹಿಮ್ಮಡಿಯನ್ನು ಎತ್ತುವುದರಿಂದ ಪಿಷ್ಠವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಲೆಗ್ ಕಿಕ್ ಬ್ಯಾಗ್ ಮಾಡುವುದರಿಂದ ನಿಮ್ಮ ಕಾಲುಗಳು ಮತ್ತು ದೇಹದ ಪಿಷ್ಟವನ್ನು ಬಲಪಡಿಸಲು ಸಹಾಯವಾಗುತ್ತದೆ. ಹಾಗೆಯೇ, ಇದು ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಕಿಕ್ ಬ್ಯಾಕ್ಸ್ ತೋಳುಗಳ ಹಿಂಭಾಗದ ಮೇಲೆ ಕೇಂದ್ರೀಕರಿಸುತ್ತದೆ. ಇದು ಹೆಚ್ಚು ಶಕ್ತಿಯುನ್ನು ಒದಗಿಸಲು ಸಹಾಯ ಮಾಡುತ್ತದೆ.
ಪ್ರತಿನಿತ್ಯ ಸ್ಕ್ವಾಟ್ ಮಾಡುವುದರಿಂದ ಇದು ನಿಮ್ಮ ಕ್ವಾಡ್ರೈಸ್ಪ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. ಇವು ಮೊಣಕಾಲು ವಿಸ್ತರಿಸಲು, ನಡೆಯಲು, ಓಡುವುದು, ಜಿಗಿಯುವುದು ಮತ್ತು ಒದೆಯುವಂತಹ ದೈನಂದಿನ ಚಲನೆಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಹೆಚ್ಚಾದ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ, ನಿಮ್ಮ ಶಕ್ತಿಯನ್ನು ಬಲಪಡಿಸುತ್ತದೆ.
ಕರುವಿನ ಏರಿಕೆಯನ್ನು ಹೊಂದಿರುವ ಸ್ಕ್ವಾಟ್‌ಗಳು ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ಕಾಲುಗಳ ಸ್ನಾಯುಗಳ ಬಲವನ್ನು ಬಲಪಡಿಸುತ್ತದೆ. ಇದು ದೇಹದಲ್ಲಿ ಶಕ್ತಿ, ಕಾರ್ಯ ಮತ್ತು ಸಮತೋಲನ್ನು ಕಾಪಾಡುತ್ತದೆ. ಪ್ರತಿನಿತ್ಯ ಇದನ್ನು ಮಾಡುವುದರಿಂದ ಕ್ರೀಡಾ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.
ಪ್ರತಿನಿತ್ಯ ಈ ವ್ಯಾಯಮವನ್ನು ಮಾಡುವುದರಿಂದ ದೇಹದಲ್ಲಿ ಸ್ಥಿರತೆ, ಸಮತೋಲನ, ನಮ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಸ್ನಾಯುಗಳನ್ನು ಬಲವರ್ಧಿಸುತ್ತದೆ. ಭಂಗಿ ಸುಧಾರಿಸಲು ಸಹಾಯ ಮಾಡುತ್ತದೆ.
ಪ್ರತಿನಿತ್ಯ ಈ ಅಭ್ಯಾಸ ಮಾಡಿಕೊಂಡವರು ಯಾವುದೇ ಕಾರಣಕ್ಕೂ ಅರ್ಧದಲ್ಲಿ ಇವುಗಳನ್ನು ಬಿಡಬಾರದು. ಹೆಚ್ಚಿನ ಜನರು ತಮ್ಮ ಮೇಲ್ಭಾಗದ ವರ್ಕೌಟ್ಗಳ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಕಾಲಿನ ವ್ಯಾಯಾಮವನ್ನು ದೂಷಿಸಬಹದು. ಆದರೆ, ನಿರ್ಲಕ್ಷಿಸಬಾರದು.
ವರದಿಗಳ ಪ್ರಕಾರ ವ್ಯಾಯಾಮಗಳು ನಿಮ್ಮ ಇಡೀ ದೇಹವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಶಕ್ತಿ, ವೇಗ ಮತ್ತು ಸ್ಥಿರತೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮ್ಮ ಕಾಲಿನ ಸ್ನಾಯುಗಳು ಯಾವುದೇ ಫಿಟ್‌ನೆಸ್ ದಿನಚರಿಯ ಅವಿಭಾಜ್ಯ ಅಂಗವಾಗಿದೆ ಮತ್ತು ನೀವು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)