ಧೂಳು ತುಂಬಿದ ಪರದೆಗಳನ್ನು ತೊಳೆಯಲು ಇಲ್ಲಿದೆ ಸುಲಭ ಮಾರ್ಗ! | Curtains

untitled-design-2025-09-29t134511607-68da4029d0baf
Published on

Curtains : ಮನೆಯ ಸೌಂದಯವನ್ನು ಹೆಚ್ಚಿಸುವಲ್ಲಿ ಪರದೆಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ನಿಮ್ಮ ಮನೆಯ ಗೋಡೆಗಳ ಬಣ್ಣಗಳಿಗೆ ಸೂಕ್ತವಾದಂತಹ ಪರದೆಗಳನ್ನು ಖರೀದಿಸಲು ಹಲವಾರು ಜನರು ಇಷ್ಟಪಡುತ್ತಾರೆ. ಕೆಲವರು ಗಾಢವಾದ ಬಣ್ಣ, ಇನ್ನು ಕೆಲವರಿಗೆ ತಿಳಿ ಬಣ್ಣಗಳ ಪರದೆಯನ್ನು ಖರೀದಿ ಮಾಡಲು ಇಷ್ಟಪಡುತ್ತಾರೆ. ತಮ್ಮ ಗೋಡೆಗಳಿಗೆ ಸರಿಹೊಂದುವಂತ ಪರದೆಗಳನ್ನು ಖರೀದಿಸಿದ ಜನರು ಅವುಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಯೋಚಿಸುವುದಿಲ್ಲ.

ನಿಮ್ಮ ಮನೆಯ ಕಿಟಕಿಗಳು ಮತ್ತು ಬಾಗಿಲುಗಳ ಮೇಲಿನ ಪರದೆಗಳು ಮನೆಯಲ್ಲಿ ಕೊಳಕು ವಸ್ತುಗಳಲ್ಲಿ ಒಂದಾಗಿರಬಹುದು. ಈ ಪರದೆಗಳಲ್ಲಿ ನಾನಾ ರೀತಿಯಲ್ಲಿ ಇದ್ದು, ಇವುಗಳನ್ನು ಸ್ವಚ್ಛಗೊಳಿಸಲು ನೀವು ಸಮಯ ನೀಡುತ್ತಿಲ್ಲ ಇರಬಹುದು. ಇವುಗಳನ್ನು ನೀವು ಸರಿಯಾಗಿ ಸ್ವಚ್ಛಗೊಳಿ ಒಣಗಿಸದೆ ಇದ್ದರೆ, ಇವು ದೀರ್ಘಕಾಲದವರೆಗೂ ಹಳೆಯದಾಗಿ ಕಾಣಬಹುದು. ಹಾಗಾಗಿ ನಿಮ್ಮ ಮನೆಯ ಪರದೆಗಳನ್ನು ಸ್ವಚ್ಛಗೊಳಿಸಲು ಅಥವಾ ಹೊಸದರಂತೆ ರೂಪುಗೊಳಿಸಲು ಕೆಳಗೆ ಕೊಟ್ಟಿರುವ ಸುಲಭ ಮಾರ್ಗಗಳನ್ನು ಅನುಸರಿಸಿ..

ಪರದೆಗಳನ್ನು ತೊಳೆಯುವುದು ಹೇಗೆ..?

1. ನಿಮ್ಮ ಮನೆಯ ಪರದೆಗಳನ್ನು ತೊಳಿಯುವ ಮೊದಲು ರಾತ್ರಿಯಿಡೀ ಅವುಗಳನ್ನು ನೀರಿನಲ್ಲಿ ನೆನಸಿಡಿ. ಈ ರೀತಿ ಮಾಡುವುದರಿಂದ ಇದು ಕೊಳೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿಯಿಡೀ ನೆನಸಿಟ್ಟ ನಂತರ, ಬೆಳಿಗ್ಗೆ ಅವುಗಳನ್ನು ಸಾಬೂನು ಹಾಕಿ ತಣ್ಣನೆಯ ನೀರಿನಿಂದ ಅವುಗಳನ್ನು ತೊಳೆಯಿರಿ. ಇದು ಹೊಸದಾಗಿ ಕಾಣುವಂತೆ ಮಾಡುತ್ತದೆ.

2. ಪರದೆಗಳು ರೇಷ್ಮೆ ಹಾಗೂ ಸೂಕ್ಷ್ಮ ಬಟ್ಟೆಗಳಿಂದ ಮಾಡಲ್ಪಟ್ಟಿದ್ದರೆ, ಅವುಗಳನ್ನು ಯಂತ್ರದಿಂದ ತೊಳೆಯಬೇಡಿ. ಬದಲಿಗೆ ಅವುಗಳನ್ನು ನೀವು ಬಳಸುವ ಸಾಬೂನುಗಳಿಂದ ಸ್ವಚ್ಛವಾಗಿ ತೊಳೆದು ನಂತರ ನೆರಳು ಬೀಳುವಂತಹ ಪ್ರದೇಶದಲ್ಲಿ ಒಣಗಿಸಿ. ಇಲ್ಲದಿದ್ದರೆ ಪರದೆಯು ಬಣ್ಣವನ್ನು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.

3. ಪರದೆಗಳನ್ನು ತೊಳೆಯುವ ಮೊದಲು ಮನೆಯ ಹೊರಗಡೆ ಹೋಗಿ ಅದರಲ್ಲಿರುವ ಧೂಳನ್ನು ಮೊದಲು ಕೊಡವಿ. ಈ ರೀತಿ ಮಾಡುವುದರಿಂದ ಪರದೆಯನ್ನು ತೊಳೆಯಲು ಸುಲಭವಾಗುತ್ತದೆ. ಹಾಗೆಯೇ ಪರದೆಯು ಹೊಸದರಂತೆ ಕಾಣಿಸುತ್ತದೆ.

4. ಪರದೆಗಳನ್ನು ತೊಳೆಯಲು ವ್ಯಕ್ಯೂಮ್​ ಕ್ಲೀನರ್​ನ್ನು ಸಹ ಬಳಸಬಹುದು. ಪರದೆಯಲ್ಲಿ ಧೂಳು ಜಾಸ್ತಿ ಇದ್ದರೆ ಮೃದುವಾದ ಬ್ರಷ್​ನಿಂದ ಅವುಗಳನ್ನು ಸ್ವಚ್ಛಗೊಳಿಸಿ. ಈ ವಿಧಾನವು ಪರದೆಗಳ ಮೇಲೆ ಸಂಗ್ರಹವಾಗಿರುವ ಯಾವುದೇ ಧೂಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.

5. ಪರದೆಗಳನ್ನು ತೊಳೆದ ನಂತರ ನೇರವಾಗಿ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಡಿ. ಬದಲಿಗೆ ಸೂರ್ಯನ ಮಂದ ಬಿಸಿಲಿನಲ್ಲಿ ಒಣಗಿಸಿ ಇಲ್ಲದಿದ್ದರೆ, ಇದು ನೇರವಾದ ಸೂರ್ಯನ ಬೇಳಕನ್ನು ಪಡೆದು ಪರದೆಯ ಬಣ್ಣವನ್ನು ಮಸುಕುಗೊಳಿಸುತ್ತದೆ. (ಏಜೆನ್ಸೀಸ್)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net