

Garba : ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಪ್ರಯಾಣಿಕರು ದಸರಾ ಹಬ್ಬದ ನಿಮಿತ್ತ ಗರ್ಭಾಗೆ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಕೈಗಾರಿಕೋದ್ಯಮ ಹರ್ಷ ಗೋಯೆಂಕಾ ಅವರು ತಮ್ಮ ಎಕ್ಸ್ (X)ಖಾತೆಯಲ್ಲಿ ವಿಮಾನ ನಿಲ್ದಾಣದಲ್ಲಿ ಗರ್ಭಾ ನೃತ್ಯದ ವಿಡಿಯೋವನ್ನು ಹಂಚಿಕೊಂಡಿದ್ದು, ಆ ಕ್ಷಣದ ವಿಶಿಷ್ಟ ಚೈತನ್ಯವನ್ನು ಶ್ಲಾಘಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು, ಪೈಲಟ್, ಸಿಬ್ಬಂದಿ, ಲೋಡರ್ಗಳು ಅಲ್ಲಿರುವ ಪ್ರತಿಯೊಬ್ಬರು ಕೂಡಾ ನೃತ್ಯವನ್ನು ಮಾಡುತ್ತಿದ್ದಾರೆ. ಸಮವಸ್ತ್ರ ಧರಿಸಿದ ಸಿಬ್ಬಂದಿಗಳು ಕೂಡಾ ಇದರ ಜೊತೆಯಲ್ಲಿ ಚಪ್ಪಾಳೆ ತಟ್ಟುತ್ತಾ ಪ್ರಯಾಣಿಕರೊಂದಿಗೆ ನೃತ್ಯ ಮಾಡುತ್ತಿರುವುದು ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ ಎಂದು ಬರೆದಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಅಧಿಕೃತ ಖಾತೆಯು ಗೋಯೆಂಕಾ ಅವರು ವಿಡಿಯೋಕ್ಕೆ ಪ್ರತಿಕ್ರಿಯಿಸಿದ್ದು, ಪ್ರಿಯ ಶ್ರೀ ಗೋಯೆಂಕಾ, ಈ ಅದ್ಭುತ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು! ಮುಂಬೈ ವಿಮಾನ ನಿಲ್ದಾಣದ ಕುಟುಂಬವು ನಮ್ಮ ಪ್ರಯಾಣಿಕರೊಂದಿಗೆ ಗರ್ಭಾದ ಸಂತೋಷವನ್ನು ಆಚರಿಸಲು ಒಟ್ಟಿಗೆ ಸೇರುವುದನ್ನು ನೋಡಿ ನಮಗೆ ಸಂತೋಷವಾಗಿದೆ. ಅಂತಹ ಸಂದರ್ಭಗಳು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ವಾಯುಯಾನದ ಉತ್ಸಾಹದೊಂದಿಗೆ ಸರಾಗವಾಗಿ ಬೆರೆಯುತ್ತವೆ ಎಂದು ಪ್ರತಿಕ್ರಿಯಿಸಿದೆ.
ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೂರಾರು ಜನರು ನೆಟ್ಟಿಗರು ಸಂತೋಷ ವ್ಯಕ್ತಪಡಿಸಿ, ಕಾಮೆಂಟ್ ಮಾಡಿದ್ದಾರೆ. ಒಬ್ಬ ಎಕ್ಸ್ ಬಳಕೆದಾರ ಪ್ರದರ್ಶನದಲ್ಲಿರುವ ಸ್ವಾಭಾವಿಕತೆ, ಸಾಂಸ್ಕೃತಿಕ ಚೈತನ್ಯವನ್ನು ಶ್ಲಾಘಿಸಿದ್ದು, ಅಂತಹ ಒತ್ತಡ ಸ್ಥಳವಾದ ವಿಮಾನ ನಿಲ್ದಾಣದಲ್ಲೂ ಭಾರತೀಯ ಹಬ್ಬದ ಉತ್ಸಾಹಗಳನ್ನು ಸೆರೆಹಿಡಿಯುವುದು ಸುಂದರ ಎಂದು ಬರೆದಿದ್ದಾರೆ.
ಇನ್ನೊಬ್ಬ ಸಾಮಾಜಿಕ ಮಾಧ್ಯಮದ ಬಳಕೆದಾರ ಕಾಮೆಂಟ್ ಮಾಡಿದ್ದು, ಪ್ರಯಾಣಿಕರ ಸುರಕ್ಷತಯನ್ನು ಕಾಪಾಡುವ ಬದಲು ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಬದಲು ನೃತ್ಯ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)