

ಹೆಬ್ರಿ: ಕುಡುಬಿ ಸಮುದಾಯದವರು ಶಿಕ್ಷಣದತ್ತ ಹೆಚ್ಚಿನ ಗಮನ ನೀಡಬೇಕು. ವಿವೇಕಾನಂದ ಯುವ ವೇದಿಕೆಯವರು ಟೂರ್ನಿ ಆಯೋಜಿಸಿ ಬಡ ಮಕ್ಕಳ ಕಲ್ಯಾಣಕ್ಕೆ ಸಂಗ್ರಹವಾದ ಹಣವನ್ನು ವಿದ್ಯಾಭ್ಯಾಸಕ್ಕೆ ನೀಡುತ್ತಿರುವುದು ಸಮಾಜಕ್ಕೆ ದೊಡ್ಡ ಕೊಡುಗೆ. ಇಂತಹ ಸಂಘ-ಸಂಸ್ಥೆ ಸಮಾಜಕ್ಕೆ ಮಾದರಿ ಎಂದು ಚಾರ ಗ್ರಾಪಂ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಹೇಳಿದರು.
ವಿವೇಕಾನಂದ ಯುವ ವೇದಿಕೆ ಹಂದಿಕಲ್ಲು ಚಾರ ವತಿಯಿಂದ ಬಡವರ ಮಕ್ಕಳ ವಿದ್ಯಾಭ್ಯಾಸದ ನೆರವಿಗೆ ಆಯೋಜಿಸಲಾದ ವಿವೇಕಾನಂದ ಟ್ರೋಫಿ ಕ್ರಿಕೆಟ್ ಟೂರ್ನಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಊಟದ ವ್ಯವಸ್ಥೆ ಮಾಡಿದ ತೆಂಗಿನಮಕ್ಕಿ ವಸಂತ ನಾಯ್ಕ ಅವರನ್ನು ಗೌರವಿಸಲಾಯಿತು. ಮುನಿಯಾಲು ಉದಯಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲ್ ಉದಯಕುಮಾರ ಶೆಟ್ಟಿ, ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಶುಭ ಹಾರೈಸಿದರು.
ಉದ್ಯಮಿ ಕಾಶಿನಾಥ್ ಶೆಣೈ, ಜೋಮ್ಲು ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ಮಿಥುನ್ ಶೆಟ್ಟಿ ಬಾವಿಗದ್ದೆ, ಪ್ರಮುಖರಾದ ಅಶೋಕ ನಾಯ್ಕ, ಜಯರಾಮ ನಾಯ್ಕ, ವಸಂತ ನಾಯ್ಕ, ದಯಾನಂದ ನಾಯ್ಕ, ಸುರೇಶ್ ನಾಯ್ಕ, ಕೃಷಿಕ ರಾಜೇಶ್ ಪೂಜಾರಿ, ಕುಡುಬಿ ಸಮುದಾಯದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.