ಸಾಕುನಾಯಿಗಳಿಗೆ ರೇಬಿಸ್ ಲಸಿಕೆ

lasike
Published on

ಕೋಟ: ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕುನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ಕಾರ್ಯಕ್ರಮ ಇತ್ತೀಚೆಗೆ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆಯಲ್ಲಿ ನಡೆಯಿತು.

ಪಿಡಿಒ ರವೀಂದ್ರ ರಾವ್ ರೇಬಿಸ್ ಲಸಿಕೆ ಮಹತ್ವದ ಬಗ್ಗೆ ತಿಳಿಸಿದರು. ಸಾಸ್ತಾನ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೂರಜ್‌ಕುಮಾರ್ ರೋಗದ ಮಾಹಿತಿ ನೀಡಿದರು.

ಕೋಡಿ ಕನ್ಯಾಣ ಹಾಲುಡೈರಿ ಹಾಗೂ ಕೋಡಿ ಹೊಸಬೆಂಗ್ರೆ ಅಂಗನವಾಡಿ ಕೇಂದ್ರಗಳಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ನೀಡಲಾಯಿತು. ಪಂಚಾಯಿತಿ ಸದಸ್ಯರಾದ ಕೆ.ಪ್ರಭಾಕರ ಮೆಂಡನ್, ಸತೀಶ್ ಜಿ.ಕುಂದರ್, ಪಶು ವೈದ್ಯಕೀಯ ಪರೀಕ್ಷಕ ಜೇನುಕಲ್ ಸಿದ್ದೇಶ್ವರ, ಗ್ರಾಮದ ಪಶು ಸಖಿ ಮಾಲತಿ, ಗ್ರಾಮಸ್ಥರು ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net