ಮೂರು ವಿಭಾಗದಲ್ಲಿ ಬಡಗಬೆಟ್ಟು ಗ್ರಾಪಂ ಪ್ರಥಮ...

Badagabettu
Published on

ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪಂಚಾಯಿತಿ

30 ಲಕ್ಷ ರೂ. ನಗದು ಪುರಸ್ಕಾರ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಗ್ರಾಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ, ವಿವಿಧ ಯೋಜನೆಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ಮೂಲಕ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮ ಪಂಚಾಯಿತಿಯು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದೆ.

ಆರೋಗ್ಯಕರ ಪಂಚಾಯಿತಿ, ಉತ್ತಮ ಆಡಳಿತ ಹಾಗೂ ನೀರು ಸಾಕಾಗುವ ಪಂಚಾಯಿತಿ ಈ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 30 ಲಕ್ಷ ರೂ. ನಗದು ಪುರಸ್ಕಾರ ಗಳಿಸಿದೆ.

ಮಂಗಳೂರಿನಲ್ಲಿ ಪುರಸ್ಕಾರ ಪ್ರದಾನ

Badagabettu 2
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸಚಿವ ಪ್ರಿಯಾಂಕ್​ ಖರ್ಗೆ ಅವರು 80 ಬಡಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ್​ ಕೋಟ್ಯಾನ್​ ಅವರಿಗೆ 30 ಲಕ್ಷ ರೂ. ನಗದು ಪುರಸ್ಕಾರ ಪ್ರದಾನ ಮಾಡಿದರು.

ಜಿಪಂ ಸಿಇಒ ಪ್ರತೀಕ ಬಾಯಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗ್ರಾಪಂ ಉಪಾಧ್ಯಕ್ಷೆ, ರೂಪಾ ನಾಯಕ್​, ಸದಸ್ಯರಾದ ನಿರುಪಮಾ ಹೆಗ್ಡೆ, ಶಾಂತಾ ನಾಯ್ಕ್​, ಶಾಂತಾರಾಮ ಶೆಟ್ಟಿ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಶೋಕಕುಮಾರ್​, ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಸಿಬ್ಬಂದಿ ಸುರೇಶ್​, ಶಶಿಕಲಾ, ಪ್ರಸಾದ್​, ಪ್ರವಿಣ್​, ರಾಘವೇಂದ್ರ ಕಾಮತ್​, ಆನಂದ್​ ಇತರರು ಇದ್ದರು.

ಉಡುಪಿ ಜಿಪಂಗೆ ತೃತೀಯ ಸ್ಥಾನ

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಪಂಗಳ ಸವೋರ್ತ್ತಮ ಸಾಧನೆಗಾಗಿ ರಾಷ್ಟ್ರಮಟ್ಟದ ನಾನಾಜೀ ದೇಶ್​ಮುಖ್​ ಸವೋರ್ತ್ತಮ್​ ಪಂಚಾಯತ್​ ವಿಕಾಸ್​ ಎಂಬ ಪುರಸ್ಕಾರದಡಿ ಉಡುಪಿ ಜಿಪಂ ತೃತೀಯ ಸ್ಥಾನದೊಂದಿಗೆ 2 ಕೋಟಿ ರೂ. ನಗದು ಪುರಸ್ಕಾರ ಗಳಿಸಿದೆ. ಆ ಪ್ರಶಸ್ತಿಯ ಮೊತ್ತವನ್ನು ಉತ್ತಮ ಸಾಧನೆಗೈದ ಗ್ರಾಪಂಗಳಿಗೆ ಹಂಚಿಕೆ ಮಾಡಲಾಗಿದ್ದು, 80 ಬಡಗಬೆಟ್ಟು ಗ್ರಾಪಂ ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, 30 ಲಕ್ಷ ರೂ. ನಗದು ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net