ಐಫೋನ್ ಬಳಕೆದಾರರೇ ಎಚ್ಚರ; ನಿಮ್ಮ ಬೆಲೆಬಾಳುವ ಫೋನ್​ಗಳೇ ಇವರ ಟಾರ್ಗೆಟ್

IPhone Theaf
Published on

ಬೆಂಗಳೂರು: ಬೆಲೆಬಾಳುವ ಐಫೋನ್ ಮೊಬೈಲ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಖದೀಮರನ್ನು ಬಂಧಿಸುವಲ್ಲಿ ವಿವೇಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋರಿಪಾಳ್ಯ ನಿವಾಸಿಗಳಾದ ಮಹಮ್ಮದ್ ಸಕ್ಲೈನ್, ಸುಹೇಲ್, ಸಾಕೀಬ್ ಬಂಧಿತರು.

ಐಫೋನ್ ಮೊಬೈಲ್​ಗಳು ಇತೆರೆ ಕಂಪೆನಿಯ ಮೊಬೈಲ್​ಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಹೀಗಾಗಿ ಖದೀಮರು ಈ ಮೊಬೈಲ್​ಗಳನ್ನು ಗುರಿಯಾಗಿಸಿಕೊಂಡಿದ್ದರು. ಬಳಿಕ ರಸ್ತೆ ಬದಿ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದವರನ್ನು ಗುರಿಯಾಗಿಸಿಕೊಂಡು, ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆಸುತ್ತಿದ್ದರು.

ಮಧ್ಯರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಬರುವವರನ್ನು ಅಡ್ಡಗಟ್ಟಿ ರಾಬರಿ ಮಾಡುತ್ತಿದ್ದ ಈ ಗ್ಯಾಂಗ್, ಒಂದು ವೇಳೆ ಮೊಬೈಲ್ ಅಥವಾ ಹಣ ಕೊಡದೇ ಇದ್ದಾಗ ಮಾರಣಾಂತಿಕವಾಗಿ ಹಲ್ಲ ಮಾಡಿ ಪರಾರಿಯಾಗುತ್ತಿದ್ದರು. ಸದ್ಯ ವಿವೇಕನಗರ ಪೊಲೀಸರಿಗೆ ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಬಂಧಿತರಿಂದ 40 ಐಫೋನ್ ಮೊಬೈಲ್ ಸೇರಿ ಒಟ್ಟು 110 ಪೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾವಿಯಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಬಯಲಾಯ್ತು ಬಾಲಕಿಯ ಚಿಮ್ಮಕ್ಕನ ಕಿರಾತಕ ಕೃತ್ಯ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net