ನಾಗರಹಾವಿನ ವಿಷ ಹೀರಿ ತಾಯಿ ಜೀವ ಉಳಿಸಿದ ಪುತ್ರಿ

ಶ್ರವ್ಯಾ ರೈ
Published on

ಪುತ್ತೂರು(ದ.ಕ): ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಾಗರಹಾವು ಕಚ್ಚಿದ ತಾಯಿಯ ಪ್ರಾಣವನ್ನು ಮಗಳು ಸಮಯಪ್ರಜ್ಞೆಯಿಂದ ಉಳಿಸಿದ್ದಾಳೆ.

ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ ರೈ ಎಂಬುವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿತ್ತು. ಈ ವೇಳೆ ಅವರ ಪುತ್ರಿ, ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ರೇಂಜರ್ ವಿದ್ಯಾರ್ಥಿನಿ ಶ್ರಮ್ಯಾ ರೈ ತಾಯಿಯ ಕಾಲಿಗೆ ಕಚ್ಚಿದ ಹಾವಿನ ವಿಷವನ್ನು ಬಾಯಿಯಲ್ಲಿ ಹೀರಿ ತೆಗೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಕೆಯ್ಯೂರು ಸತೀಶ್ ರೈ ಅವರ ಪತ್ನಿ ಮಮತಾ ರೈ ಅವರು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ತನ್ನ ಮಾವನ ತೋಟಕ್ಕೆ ಹೋಗಿದ್ದರು. ಈ ವೇಳೆ ಕಾಲಿಗೆ ಹಾವು ಕಚ್ಚಿದ್ದು, ಹಾವಿನ ಒಂದು ಹಲ್ಲು ಬಲವಾಗಿ ತಾಯಿ ರಕ್ತ ಸುರಿಯಲು ಪ್ರಾರಂಭವಾಗಿದೆ. ಕೂಡಲೇ ಮಮತಾ ರೈ ಅವರು ಮನೆಗೆ ಮತ್ತು ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ.

ಮನೆಯಲ್ಲಿದ್ದ ಕೆಲಸದವರು ಮಮತಾ ರೈ ಅವರ ಕಾಲಿಗೆ ಬೈಹುಲ್ಲಿನಿಂದ ವಿಷ ಮೇಲಕ್ಕೆ ಹೋಗದಂತೆ ಬಿಗಿಯಾಗಿ ಕಟ್ಟಿದ್ದಾರೆ. ಈ ವೇಳೆ ಮಗಳು ಶ್ರಮ್ಯಾ ರೈ, ಧೈರ್ಯದಿಂದ ಹಾವು ಕಚ್ಚಿದ ಭಾಗಕ್ಕೆ ಬಾಯಿ ಇಟ್ಟು ರಕ್ತವನ್ನು ಹೀರಿ ತೆಗೆದಿದ್ದಾರೆ. ಬಳಿಕ ಮಮತಾ ರೈ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ.

ಮಗಳ ತುರ್ತು ಚಿಕಿತ್ಸೆಯಿಂದಾಗಿ ಮಮತಾ ರೈ ಅವರು ಅಪಾಯದಿಂದ ಪಾರಾಗಿದ್ದು, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಇದೀಗ ಶ್ರವ್ಯಾ ರೈ ಅವರ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net