More

    ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ದಂಪತಿ ಖಾತೆಯಿಂದ 3.7 ಲಕ್ಷ ರೂ. ಎಗರಿಸಿದ ಸೈಬರ್ ಕಳ್ಳರು!

    ಬೆಂಗಳೂರು: ನಾವು ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿಕೊಂಡ ಆನ್​ಲೈನ್ ವಂಚಕರು ನಗರದ ರೆಸ್ಟೋರೆಂಟ್ ಮಾಲೀಕ ಮತ್ತು ಅವರ ದಂಪತಿಗೆ 3.7 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಬ್ಲೇಸ್ ಡಿಸೋಜಾ ಮತ್ತು ಅವರ ಪತ್ನಿ ಡಯಾನಾ ಡಿಸೋಜಾ ವಂಚನೆಗೊಳಗಾದವರು.

    ”ಆತ್ಮೀಯ ಗ್ರಾಹಕರೇ, ಹಿಂದಿನ ತಿಂಗಳ ಬಿಲ್ ನವೀಕರಿಸದ ಕಾರಣ ಇಂದು ರಾತ್ರಿ 9.30 ಕ್ಕೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ” ಎಂದು ವಂಚಕರು ಫೆ.28ರಂದು ಬೆಸ್ಕಾಂ ಬಿಲ್ ಪಾವತಿ ಅಪ್​ಡೇಟ್ ಆಗಿಲ್ಲ ಎಂದು ಮೆಸೇಜ್ ಕಳುಹಿಸಿದ್ದಾರೆ. ಈ ವೇಳೆ ಡಯಾನಾಗೆ ಶರ್ಮಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಕರೆ ಬಂದಿದ್ದು, ಬೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ನಂಬರ್ ಕೇಳಿದ್ದಾರೆ. ಈ ವೇಳೆ ಬಿಲ್​ನ ಸರಿಯಾದ ಆರ್​ಆರ್ ಸಂಖ್ಯೆ ಮತ್ತು ಬ್ಯಾಂಕ್ ವಿವರ ನೀಡಿದ್ದಾರೆ.

    ಇದನ್ನೂ ಓದಿ: ಕಲಬುರಗಿ | ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲೇ ಪ್ರಾಣಬಿಟ್ಟ ಹೆಡ್​​ ಕಾನ್​​ಸ್ಟೇಬಲ್

    ವಂಚಕರು ಯೆಸ್ ಬ್ಯಾಂಕ್‌ನಲ್ಲಿರುವ ಜಂಟಿ ಖಾತೆಯಿಂದ ಹಣ ತೆಗೆದಿದ್ದಾರೆ. ಅಲ್ಲದೆ ಆಕ್ಸಿಸ್ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಲೂ ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ಬ್ಲೇಸ್ ಡಿಸೋಜಾ ಅವರ ಪತ್ನಿ ಡಯಾನಾ ಡಿಸೋಜಾ ಹೇಳಿದ್ದಾರೆ.

    ಬ್ಲೇಸ್ ಅವರ ಆಕ್ಸಿಸ್ ಬ್ಯಾಂಕ್ ಖಾತೆ ಹ್ಯಾಕ್ ಮಾಡಲು ಪ್ರಯತ್ನಿಸಿದ್ದು, 20,000 ರೂ. ಮತ್ತು 40,000 ರೂ. ಹಣ ಡ್ರಾ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆಲರ್ಟ್ ಮ್ಯಾನೇಜರ್ ವಹಿವಾಟುಗಳನ್ನು ನಿರ್ಬಂಧಿಸಿದ್ದರಿಂದ ಹಣ ಪಡೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಡಯಾನ ಸೈಬರ್ ಕ್ರೈ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ನಿಂದ ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಣೆ; 3,000 ರೂ. ನಿರುದ್ಯೋಗ ಭತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts