More

  ರೈಲು ನಿಲ್ದಾಣದ ಟಿ.ವಿ ಪರದೆಯಲ್ಲಿ ಪ್ರದರ್ಶನವಾದ ನೀಲಿ ಚಿತ್ರ; ಮುಜುಗರಕ್ಕೊಳಗಾದ ಪ್ರಯಾಣಿಕರು

  ಪಾಟನಾ: ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ಟಿ.ವಿ. ಪರದೆಯಲ್ಲಿ ಮೂರು ನಿಮಿಷಗಳ ಕಾಲ ನೀಲಿ ಚಿತ್ರ ಪ್ರದರ್ಶನಗೊಂಡ ಘಟನೆ ನಿನ್ನೆ (ಮಾ.19) ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. ಈ ಘಟನೆಯಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೊಳಗಾದ ಸನ್ನಿವೇಶ ಎದುರಾಗಿದೆ.

  ರೈಲ್ವೇ ನಿಲ್ದಾಣದ ಟಿ.ವಿ.ಯಲ್ಲಿ ನೀಲಿಚಿತ್ರ ಪ್ರದರ್ಶನವಾಗುತ್ತಿದ್ದಂತೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

  ಇದನ್ನೂ ಓದಿ: ಕತಾರ್​ನಲ್ಲಿ ಕಬ್ಜ ಚಿತ್ರದ ಅದ್ದೂರಿ ಪ್ರದರ್ಶನ; ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

  ದೂರು ದಾಖಲಿಸಿಕೊಂಡ ಆರ್​ಪಿಎಫ್ ಅಧಿಕಾರಿಗಳು, ಟಿ.ವಿಯಲ್ಲಿ ಜಾಹೀರಾತು ಪ್ರದರ್ಶಿಸುವ ಜವಾಬ್ದಾರಿ ವಹಿಸಿಕೊಂಡ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ನೀಲಿ ಚಿತ್ರ ಪ್ರದರ್ಶನವಾಗುತ್ತಿರುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ರೈಲ್ವೇ ಅಧಿಕಾರಿಗಳು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಿ, ದಂಡ ವಿಧಿಸಿದ್ದಾರೆ.

  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಅಧಿಕಾರಿಗಳು, ನಿಲ್ದಾಣದಲ್ಲಿ ಟಿ.ವಿ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಏಜೆನ್ಸಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)

  ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಜಾನ್​ ಕೂಗಿದ ಯುವಕ; ಆತನ ಧೈರ್ಯದ ಹಿಂದೆ ಇರೋದು ಕಾಂಗ್ರೆಸ್ ಪಕ್ಷ ಎಂದ ಶೋಭಾ ಕರಂದ್ಲಾಜೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts