

ಕೋಟ: ವಿವೇಕ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗಕ್ಕೆ ಶಾಲಾ ಮುಖಂಡ ಮತ್ತು ಉಪಮುಖಂಡ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇವಿಎಂ ಆ್ಯಪ್ ಬಳಸಿ ಚುನಾವಣೆ ನಡೆಸಲಾಯಿತು. ನಾಲ್ಕು ಅಭ್ಯರ್ಥಿಗಳು ಶಾಲಾ ಮುಖಂಡನ ಸ್ಥಾನಕ್ಕೆ, ಇಬ್ಬರು ಅಭ್ಯರ್ಥಿಗಳು ಉಪಮುಖಂಡನ ಆಯ್ಕೆಗೆ ಸ್ಪರ್ಧಿಸಿದ್ದರು.
ಎಲ್ಲ ವಿದ್ಯಾರ್ಥಿಗಳು ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಾಂಶುಪಾಲ ಜಗದೀಶ ನಾವಡ ವಿಜೇತ ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು. ಶಾಲಾ ಮುಖಂಡನ ಸ್ಥಾನಕ್ಕೆ ಕೇಶವ ಉಪಾಧ್ಯ ಹಾಗೂ ಉಪಮುಖಂಡನ ಸ್ಥಾನಕ್ಕೆ ನಿತಿನ್ ಕಿಣಿ ಚುನಾಯಿತರಾದರು. ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ವೆಂಕಟೇಶ ಉಡುಪ ಉಪಸ್ಥಿತರಿದ್ದರು. ಗಣೇಶ್ ಕುಮಾರ್ ಶೆಟ್ಟಿ ಅಚ್ಲಾಡಿ, ರತಿ ಬಾ ಸಹಕರಿಸಿದರು. ಎಲ್ಲ ಸಿಬ್ಬಂದಿ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.