ಕೋಟ ಶ್ರೀನಿವಾಸ ಪೂಜಾರಿಗೆ ಗಾನಾಭಿನಂದನೆ

sanmana
ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ಶ್ವೇತಯಾನ ಕಾರ್ಯಕ್ರಮದಡಿ ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ಧಿಮ್ಸಾಲ್ ಫಿಲ್ಮ್ಸ್ ಸಹಕಾರದೊಂದಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಗಾನಾಭಿನಂದನೆ ಸಲ್ಲಿಸಲಾಯಿತು
Published on

ಕೋಟ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ಶ್ವೇತಯಾನ ಕಾರ್ಯಕ್ರಮದಡಿ ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ಧಿಮ್ಸಾಲ್ ಫಿಲ್ಮ್ಸ್ ಸಹಕಾರದೊಂದಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಗಾನಾಭಿನಂದನೆ ಸಲ್ಲಿಸಲಾಯಿತು.

ಕೋಟ ಸುದರ್ಶನ ಉರಾಳ, ಯಕ್ಷಗುರು ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಯಕ್ಷಗಾನ ಹಿಮ್ಮೇಳದ ಪೇಟ ತೊಡಿಸಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಮದ್ದಳೆ, ರಾಹುಲ್ ಕುಂದರ್ ಕೋಡಿ ಚೆಂಡೆಯ ಸಾಥ್‌ನೊಂದಿಗೆ ಯಕ್ಷಗುರು ಲಂಬೋದರ ಹೆಗಡೆಯವರು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಸಾಹಿತ್ಯದಲ್ಲಿ ಗಾನಾಭಿನಂದನೆ ಸಲ್ಲಿಸಿದರು.

ಜಿಪಂ ಮಾಜಿ ಸದಸ್ಯ ಗಣಪತಿ ಟಿ.ಶ್ರೀಯಾನ್, ಯಶಸ್ವೀ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಉದ್ಯಮಿ ಸುಬ್ರಾಯ ಆಚಾರ್, ಯಕ್ಷಗುರು ಸೀತಾರಾಮ ಶೆಟ್ಟಿ ಕೊಕೂರು ಉಪಸ್ಥಿತರಿದ್ದರು. ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಕೊಮೆ ಗೋಪಾಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net