ಪ್ರಿಯಾಂಕಾ ವಾಗ್ಲೆಗೆ ದಿ ಬೆಸ್ಟ್ ಮಾಸ್ಟರ್ಸ್‌ ಥೀಸಿಸ್ ಗೌರವ

priyanka
ಪ್ರಿಯಾಂಕಾ ವಾಗ್ಲೆ
Published on

ಶಿರ್ವ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಪದವಿ ಗಳಿಸಿ ವಿದೇಶದ ಲಿಥ್ವೇನಿಯಾ(ಯೂರೋಪ್) ವಿಲ್ನಿಯಸ್ ಗಾಡಿಮಿನಸ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸುತ್ತಿದ್ದಂತೆ ಅವರು ಸಿದ್ಧಪಡಿಸಿದ ಇನ್ವೆಸ್ಟಿಗೇಷನ್ ಆ್ಯಂಡ್ ಇವ್ಯಾಲ್ಯೂವೇಷನ್ ಆಫ್‌ದ ಇಂಪ್ಯಾಕ್ಟ್ ಆಫ್ ಆ್ಯಂಟಿವೈರಸ್ ಪ್ರೊಟೆಕ್ಷನ್ ಆನ್ ದಿ ಪರ್ಫಾರ‌್ಮೆನ್ಸ್ ಆಫ್‌ದ ಪರ್ಸನಲ್ ಕಂಪ್ಯೂಟರ್ ಪ್ರೌಢ ಪ್ರಬಂಧ ದಿ ಬೆಸ್ಟ್ ಮಾಸ್ಟರ್ಸ್‌ ಥೀಸಿಸ್ ಮನ್ನಣೆ ಗಳಿಸಿದೆ. ಇವರು ಬಂಟಕಲ್ಲು ವಿಠಲ ವಾಗ್ಲೆ, ಗೀತಾ ವಾಗ್ಲೆ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net