

ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವ ಬೆನ್ನಲ್ಲೇ ಹೊಸ ಪ್ರತಿಭೆಗಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಜ್ಜಾಗಿದ್ದಾರೆ ನಟ ವಿವೇಕ್ ಓಬೇರಾಯ್. ಹೌದು, ರೋಸಿ ಶೀರ್ಷಿಕೆಯ ಸಿನಿಮಾ ಕೈಗೆತ್ತಿಕೊಂಡಿದ್ದು, ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡವನ್ನು ತಪ್ಪಾಗಿ ಬರೆದ ನಿರ್ದೇಶಕ ಯೋಗರಾಜ್ ಭಟ್
ಈ ವಿಚಾರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ವಿವೇಕ್ ಓಬೇರಾಯ್, ‘ಹಾರರ್ ಥ್ರಿಲ್ಲರ್ ಶೈಲಿಯಲ್ಲಿ ನಿರ್ಮಾಣವಾಗಲಿರುವ ರೋಸಿ ಸಿನಿಮಾ ನಮ್ಮ ಬ್ಯಾನರ್ನಲ್ಲಿ ಸಿದ್ಧವಾಗುತ್ತಿದೆ. ಮಂದಿರಾ ಎಂಟರ್ಟೈನ್ಮೆಂಟ್ ಮತ್ತು ಓಬೇರಾಯ್ ಪ್ರೊಡಕ್ಷನ್ ಹೌಸ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ನೈಜ ಘಟನೆ ಆಧರಿತ ಈ ಸಿನಿಮಾಕ್ಕೆ ವಿಶಾಲ್ ಮಿಶ್ರಾ ನಿರ್ದೇಶನ ಮಾಡಲಿದ್ದಾರೆ.’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆ್ಯಪ್ನಲ್ಲಿ ಬಿಡುಗಡೆಯಾಗುತ್ತಾ ‘ಆರ್.ಆರ್.ಆರ್’?
ಅದೇ ರೀತಿ ಇನ್ನೊಂದು ಟ್ವಟ್ ಮೂಲಕ ಹೊಸ ಪ್ರತಿಭಾವಂತ ಕಲಾವಿದರಿಗಾಗಿ ಹುಡುಕಾಟ ನಡೆದಿದ್ದು, ಅದಕ್ಕಾಗಿ ಆಡಿಷನ್ ಸಹ ಆಯೋಜಿಸಿದ್ದಾರೆ. ಸಿನಿಮಾಸಕ್ತರು ಆಡಿಷನ್ನಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ. ಈ ಮೊದಲು ಇತಿ ಶೀರ್ಷಿಕೆಯ ಸಿನಿಮಾ ನಿರ್ಮಾಣ ಮಾಡಿದ್ದ ಓಬೇರಾಯ್, ಇದೀಗ ಅದೇ ಶೈಲಿಯ ಥ್ರಿಲ್ಲರ್ ಹಿಂದೆ ಬಿದ್ದಿದ್ದಾರೆ.