

ನಿರ್ದೇಶಕ ಯೋಗರಾಜ್ ಭಟ್ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇದೇ ರೀತಿ ಇದೀಗ ಗಣೇಶ್ ಜನ್ಮದಿನಕ್ಕೆ ಶುಭಾಶಯ ಕೋರುವ ಭರದಲ್ಲಿ ಪೋಸ್ಟರ್ನಲ್ಲಿ ಕನ್ನಡವನ್ನೇ ತಪ್ಪಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಚಾರ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಯೋಗರಾಜ್ ಭಟ್ ಅವರ ಬಗ್ಗೆ ಬಗೆಬಗೆ ಕಮೆಂಟ್ಗಳು ಸಂದಾಯವಾಗುತ್ತಿವೆ. ಆದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅವರು, ಏನೂ ಆಗೇ ಇಲ್ವೇನೋ ಅನ್ನೋ ಥರ ಇದ್ದಾರೆ.
ಹೌದು, ಗಾಳಿಪಟ 2 ಚಿತ್ರದ ಪೋಸ್ಟರ್ನಲ್ಲಿ ‘ಹುದ್ದಿಟ ಹಬ್ಬದ ಶುಶಾಭಯ‘ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಒಂದಷ್ಟು ಮಂದಿ ಏನೋ ಇದೆ ಎಂದರೆ, ಕನ್ನಡ ಬರಲ್ವೇನ್ರಿ ಎಂದಿದ್ದಾರೆ. ಮತ್ತೊಂದಿಷ್ಟು ಮಂದಿ ಪೋಸ್ಟರ ಹಿಂದೆ ಏನೋ ಅಡಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ
ಹೌದು, ಗಾಳಿಪಟ ಸಿನಿಮಾದಲ್ಲಿ ಗಣೇಶ್ ಕನ್ನಡದಲ್ಲಿ ಅಷ್ಟಕಷ್ಟೇ. ತಪ್ಪು ತಪ್ಪಾಗಿ ಕನ್ನಡ ಬರೆದು ಅಪಹಾಸ್ಯಕ್ಕೆ ಒಳಗಾಗುತ್ತಿತ್ತು ಅವರ ಪಾತ್ರ. ಇದೀಗ ಆ ಪಾತ್ರವನ್ನೇ ಮತ್ತೆ ನೆನಪಿಸಿದ್ದಾರೆ ಯೋಗರಾಜ್ ಭಟ್. ಒಟ್ಟಿನಲ್ಲಿ ಗಣೇಶ್ ಜನ್ಮದಿನಕ್ಕೆ ಕರೊನಾ ಅಡ್ಡಿಯ ನಡುವೆಯೂ, ಅಭಿಮಾನಿಗಳಿಗೆ ಒಂದಷ್ಟು ಸಪ್ರೈಸ್ಗಳು ಸಿಕ್ಕಿವೆ. ಸುನಿ ಜತೆ ಹೊಸ ಸಿನಿಮಾ, ಪ್ರಶಾಂತ್ ರಾಜ್ ಜತೆ ಮತ್ತೊಂದು ಸಿನಿಮಾದಲ್ಲಿ ಗಣೇಶ್ ನಟಿಸಲಿದ್ದಾರೆ.