More

    ಸೂರ್ಯವಂಶಿಯಲ್ಲಿ ಕರಣ್​ ಜೋಹಾರ್​ ಪಾಲುದಾರಿಕೆ ಇದೆಯೋ ಇಲ್ಲವೋ?

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಬೆನ್ನಲ್ಲೇ ನೆಪೋಟಿಸಂ ವಿಚಾರವಾಗಿ ಕರಣ್​ ಜೋಹರ್​ ಅವರನ್ನು ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಅದರ ಬೆನ್ನಲ್ಲೇ ಅವರ ಸಿನಿಮಾಗಳನ್ನು ಬ್ಯಾನ್ ಮಾಡಲಾಗುವುದೆಂದೂ ಹೇಳಿದ್ದರು. ಇದೀಗ ಹೊಸ ಸುದ್ದಿ ಏನೆಂದರೆ, ಸೂರ್ಯವಂಶಿ ಸಿನಿಮಾದಲ್ಲಿ ಕರಣ್​ ಜೋಹರ್​ ಪಾಲುದಾರಿಕೆ ಇದೆಯೋ ಇಲ್ಲವೋ ಎಂಬುದು ಅನುಮಾನ ಮೂಡಿಸಿದೆ.

    ಇದನ್ನೂ ಓದಿ: ಇಲ್ಲಿ ಏನಾಗ್ತಿದೆ ಹೇಳಿ? ತಲೆಗೆ ಹುಳ ಬಿಟ್ಟ ಪ್ರಶಾಂತ್​ ನೀಲ್​

    ಹೌದು, ಈ ಪ್ರಶ್ನೆಗೆ ಎರಡು ರೀತಿಯಲ್ಲಿ ಉತ್ತರಗಳು ಕೇಳಿಬರುತ್ತಿದ್ದು, ಅವರೂ ಒಬ್ಬ ಪ್ರೊಡ್ಯೂಸರ್​ ಎಂಬುದು ಒಂದೆಡೆಯಾದರೆ, ಅವರ ಪಾಲುದಾರಿಕೆ ಇಲ್ಲ ಅಂತಲೂ ಮಾತು ಕೇಳಿಬರುತ್ತಿದೆ. ಹೀಗೆ ಒಂದಷ್ಟು ಮಾತುಗಳು ಕೇಳಿಬರುತ್ತಿದ್ದಂತೆ, ಕರಣ್​ ಜೋಹರ್ ಸೂರ್ಯವಂಶಿ ಚಿತ್ರದ ಭಾಗ ಅಲ್ಲ ಎಂಬ ಸುದ್ದಿ ಸುಳ್ಳು ಎಂದು ಟ್ರೇಡ್​ ವಿಮರ್ಶಕ​ ತರುಣ್​ ಆದರ್ಶ್​ ತಮ್ಮ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.
    ನೆಪೋಟಿಸಂ ಸದ್ದು ಜೋರಾಗುತ್ತಿದ್ದಂತೆ ಸೂರ್ಯವಂಶಿ ಚಿತ್ರದಿಂದ ಕರಣ್​ ಜೋಹರ್​ ಹೊರನಡೆದಿದ್ದಾರೆ. ಅಷ್ಟೇ ಅಲ್ಲ ಅವರ ಪಾಲಿನ ಶೇರ್​ ಸಹ ವಾಪಸು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇನ್ನೇನಿದ್ದರೂ ನಿರ್ಮಾಣ ಸಂಸ್ಥೆಯಾದ ರಿಲಯನ್ಸ್ ಎಂಟರ್ಟೈನ್​ಮೆಂಟ್​ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಬೇಕಷ್ಟೇ.

    ಇದನ್ನೂ ಓದಿ: ಗಣೇಶ್ ಹುಟ್ಟುಹಬ್ಬಕ್ಕೆ ಇನ್ನೊಂದು ಸಿನಿಮಾ ಅನೌನ್ಸ್​ ಆಯ್ತು!

    ಈಗಾಗಲೇ ಆಲಿಯಾ ಭಟ್​ ಮತ್ತು ಕರಣ್​ ಜೋಹರ್​ ಸಿನಿಮಾಗಳನ್ನು ಬ್ಯಾನ್​ ಮಾಡಿ ಎಂದು ಆನ್​ಲೈನ್​ನಲ್ಲಿ ಅನೇಕರು ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಇದರಿಂದ ಸೂರ್ಯವಂಶಿ ಸಿನಿಮಾಕ್ಕೂ ಏನಾದರೂ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕೆ ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆಯೇ ? ಎಂಬ ಪ್ರಶ್ನೆಯೂ ಉದ್ಬವವಾಗಿದೆ. (ಏಜೆನ್ಸೀಸ್​)

    ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts