More

    ‘ಹೊಂದಿಸಿ ಬರೆಯಿರಿ’ ಚಿತ್ರತಂಡಕ್ಕೆ ಸಾಥ್​ ಕೊಟ್ಟ ಯೋಗರಾಜ್​ ಭಟ್​ …

    ಬೆಂಗಳೂರು: ಸಾಮಾನ್ಯವಾಗಿ ಚಿತ್ರತಂಡದವರು ಯೋಗರಾಜ್​ ಭಟ್​ ಬಳಿ ಹೋಗೋದು ಅವರಿಂದ ಹಾಡು ಬರೆಸುವುದಕ್ಕೆ. ಇಲ್ಲ, ಅವರಿಂದ ಒಂದು ಪಾತ್ರ ಮಾಡಿಸುವುದಕ್ಕೆ. ಆದರೆ, ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ಹೊಂದಿಸಿ ಬರೆಯಿರಿ’ ಚಿತ್ರತಂಡದವರು ಭಟ್ಟರ ಬಳಿ ಹೋಗಿದ್ದು, ತಮ್ಮ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿಸುವುದಕ್ಕೆ ಎಂದರೆ ನೀವು ನಂಬಬೇಕು.

    ಇದನ್ನೂ ಓದಿ: ಹೊಸ ವರ್ಷಕ್ಕೆ ಸೆಟ್ಟೇರಿತು ನಾನಿ ಅಭಿನಯದ 30ನೇ ಚಿತ್ರ … ಇದು ಅಪ್ಪ-ಮಗಳ ಬಾಂಧವ್ಯದ ಕಥೆ

    ‘ಹೊಂದಿಸಿ ಬರೆಯಿರಿ’ ಚಿತ್ರತಂಡಕ್ಕೆ ಸಾಥ್​ ಕೊಟ್ಟ ಯೋಗರಾಜ್​ ಭಟ್​ …ಹೌರು, ‘ಹೊಂದಿಸಿ ಬರೆಯಿರಿ’ ಚಿತ್ರದ ಹಾಡುಗಳು ಮತ್ತು ಟೀಸರ್​ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ‘ನೀ ಇರದ ನಾಳೆ’ ಹಾಡಿನ ಲಿರಿಕಲ್ ವೀಡಿಯೋವನ್ನು ಚಿತ್ರತಂಡವು ಯೋಗರಾಜ್​ ಭಟ್​ ಅವರಿಂದ ರಿಲೀಸ್ ಮಾಡಿದೆ. ಭಟ್ಟರು ಹಾಡು ನೋಡಿ, ಕೇಳಿ, ಮೆಚ್ಚಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಪ್ರವೀಣ್​ ತೇಜ್​, ನವೀನ್ ಶಂಕರ್​, ಭಾವನಾ ರಾವ್​ ಮುಂತಾದವರು ಹಾಜರಿದ್ದರು.

    ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಪ್ರತಿ ಹಾಡು ಸಹ ಬಹಳ ಮುಖ್ಯ ಪಾತ್ರ ವಹಿಸುತ್ತದಂತೆ. ಈ ಪೈಕಿ ‘ನೀ ಇರದ ನಾಳೆ …’ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಸಂಬಂಧಗಳಲ್ಲಿರುವ ಗೊಂದಲವನ್ನು ಈ ಹಾಡು ವ್ಯಕ್ತಪಡಿಸುತ್ತದೆ. ಪ್ರವೀಣ್ ತೇಜ್, ಭಾವನ ರಾವ್ ಈ ಹಾಡಿನ ಭಾಗವಾಗಿದ್ದು, ಈ ಹಾಡು ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಬರುತ್ತದಂತೆ. ಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್ ಧ್ವನಿಯಾಗಿರುವ ಈ ಹಾಡಿಗೆ ಜೋ ಕೋಸ್ಟ ಸಂಗೀತ ಸಂಯೋಜಿಸಿದ್ದಾರೆ.

    ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇಗೌಡ, ಸುಧಾ ನರಸಿಂಹರಾಜು ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ಐವರು ಸ್ನೇಹಿತರ ಬದುಕಿನ ಒಂದೊಂದು ಚಿತ್ರಣ ಹಾಗೂ ಭಾವನಾತ್ಮಕ ಜರ್ನಿ ಇದೆ.

    ಇದನ್ನೂ ಓದಿರಿ: ಹೊಸ ವರ್ಷಕ್ಕೊಂದು ಹೊಸ ಟೈಟಲ್​ ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’…

    ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದು. ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

    ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ ‘ದಿಯಾ’ ಖುಷಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts