More

    ಹೊಸ ವರ್ಷಕ್ಕೊಂದು ಹೊಸ ಟೈಟಲ್​ ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’…

    ಬೆಂಗಳೂರು: ಈ ಹಿಂದೆ ‘ಐ1’ ಎಂಬ ಸಿನಿಮಾ ಬಂದಿತ್ತು. ಅದರಲ್ಲಿ ಕಿಶೋರ್​ ನಾಯಕನಾಗಿ ನಟಿಸಿದ್ದರು. ಆ ನಂತರ ಅವರು ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಇದೀಗ ಅವರು ‘ಷಡಕ್ಷರಿ ಸನ್​ ಆಫ್​ ಪಂಚಾಕ್ಷರಿ’ ಎಂಬ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಅನಾವರಣ ಮಾಡಲಾಗಿದೆ.

    ಇದನ್ನೂ ಓದಿ: ಹೊಸ ವರ್ಷಕ್ಕೆ ಸೆಟ್ಟೇರಿತು ನಾನಿ ಅಭಿನಯದ 30ನೇ ಚಿತ್ರ … ಇದು ಅಪ್ಪ-ಮಗಳ ಬಾಂಧವ್ಯದ ಕಥೆ

    ಅಂದಹಾಗೆ, ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದು ಯಾರು ಗೊತ್ತಾ? ‘ಡಾರ್ಲಿಂಗ್’ ಕೃಷ್ಣ. ಹೊಸ ವರ್ಷದ ಪ್ರಯುಕ್ತ ಅವರು ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಶಿವರಾಜ್​ ಸಕ್ರೆ. ಈ ಹಿಂದೆ ‘ಉಡುಂಬಾ’ ಎಂಬ ಚಿತ್ರ ನಿರ್ದೇಶಿಸಿದ್ದ ಸಕ್ರೆ, ಈಗ ಹೊಸದೊಂದು ವಿಷಯ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದೆ. ಇದೊಂದು ಥ್ರಿಲ್ಲರ್​ ಕಥೆಯಂತೆ. ಆದರೆ, ಈ ಕಥೆ ಪ್ರೇಕ್ಷಕರಿಗೆ ಯಾವ ರೀತಿ ಥ್ರಿಲ್​ ಕೊಡುತ್ತದೆ ಎಂಬುದನ್ನು ಇನ್ನಷ್ಟೇ ನೋಡಬೇಕು. ಏಕೆಂದರೆ, ಚಿತ್ರ ಶುರುವಾಗುವುದು ಜನವರಿ 28ಕ್ಕೆ.

    ಇದನ್ನೂ ಓದಿ: ಮತ್ತೊಮ್ಮೆ ‘ಗೂಢಾಚಾರಿ’ ಆಗಲು ಹೊರಟ ಅಡವಿ ಶೇಷ್​ …

    ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಚಿತ್ರವನ್ನು ಶಿವರಾಜ್ ಸಕ್ರೆ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸಹ ಅವರೇ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಿಶೋರ್​ಗೆ ಇಬ್ಬರು ನಾಯಕಿಯರಿದ್ದಉ, ಮಿಕ್ಕಂತೆ ರಂಗಾಯಣ ರಘು, ಸುಜಯ್ ಶಾಸ್ತ್ರಿ, ಮಧುಸೂದನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುಚೇತನ್ ರಂಗಸ್ವಾಮಿ ಸಂಗೀತ ಸಂಯೋಜಿಸುತ್ತಿದ್ದು, ಈ ಚಿತ್ರವನ್ನು ಶೈಲಜಾ ಪ್ರಕಾಶ್​ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆಯಂತೆ.

    ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ ‘ದಿಯಾ’ ಖುಷಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts