More

    ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ ‘ದಿಯಾ’ ಖುಷಿ …

    ಬೆಂಗಳೂರು: ‘ದಿಯಾ’ ನಂತರ ಖುಷಿ ರವಿ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈ ಎರಡು ವರ್ಷಗಳಲ್ಲಿ ಅವರು ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೂ, ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ಖುಷಿ ಇದೇ ಜನವರಿ 6ರಂದು ಹೆದರಿಸುವುದಕ್ಕೆ ಬರುತ್ತಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ‘ಗೂಢಾಚಾರಿ’ ಆಗಲು ಹೊರಟ ಅಡವಿ ಶೇಷ್​ …

    ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ 'ದಿಯಾ' ಖುಷಿ …ಮೊದಲ ಲಾಕ್​ಡೌನ್​ ಮುಗಿದ ನಂತರ ಶುರುವಾದ ಚಿತ್ರ ‘ಸ್ಪೂಕಿ ಕಾಲೇಜ್​’. ಸ್ಪೂಕಿ ಎಂದರೆ ಭಯ ಎಂದರ್ಥ. ಹಳೆಯ ಕಾಲೇಜೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳ ಸುತ್ತ ಸುತ್ತುವ ಕಥೆಯಾದ್ದರಿಂದ ಚಿತ್ರಕ್ಕೆ ‘ಸ್ಪೂಕಿ ಕಾಲೇಜ್​’ ಎಂದು ಹೆಸರಿಡಲಾಗಿದ್ದು, ಈ ಚಿತ್ರದಲ್ಲಿ ಖುಷಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ವಿವೇಕ್​ ಸಿಂಹ ಈ ಚಿತ್ರದ ನಾಯಕ.

    ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಭರತ್​, ‘ಇಲ್ಲಿ ಭಯವನ್ನು ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದೇವೆ. ಧಾರವಾಡದ ನೂರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕಾಲೇಜ್​ನಲ್ಲಿ ನಮ್ಮ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ದಾಂಡೇಲಿ ಅಭಯಾರಣ್ಯದಲ್ಲೂ ಚಿತ್ರೀಕರಣ ಮಾಡಿದ್ದೇವೆ. ‘ವೀರ ಕೇಸರಿ’ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ನಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ‌. ರೀಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.

    ವಿವೇಕ್​ ಸಿಂಹ ಇದಕ್ಕೂ ಮುನ್ನ ‘ಚೂರಿಕಟ್ಟೆ’ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲೂ ನಟಿಸಿದ್ದ ಅವರು, ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಇನ್ನು, ಈ ಚಿತ್ರದ ಬಗ್ಗೆ ಮಾತನಾಡುವ ಖುಷಿ, ”ದಿಯಾ” ಚಿತ್ರದಲ್ಲಿ ಎಲ್ಲರನ್ನೂ ಅಳಿಸಿದ್ದೆ. ಈ ಚಿತ್ರದಲ್ಲಿ ಭಯಪಡಿಸುತ್ತೇನೆ’ ಎನ್ನುತ್ತಾರೆ.

    ಇದನ್ನೂ ಓದಿ: ಹೊಸ ಅವತಾರದಲ್ಲಿ ವಿನಯ್ ರಾಜಕುಮಾರ್ … ಮೊದಲ ಬಾರಿಗೆ ರಫ್​ ಅಂಡ್​ ಟಫ್​ ಪಾತ್ರದಲ್ಲಿ ನಟನೆ

    ‘ಸ್ಪೂಕಿ ಕಾಲೇಜ್​’ ಚಿತ್ರದಲ್ಲಿ ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದು, ಮನೋಹರ್​ ಜೋಷಿ ಛಾಯಾಗ್ರಹಣ ಮತ್ತು ಅಜನೀಶ್​ ಲೋಕನಾಥ್​ ಸಂಗೀತವಿದೆ. ಈ ಹಿಂದೆ ‘ರಂಗಿ ತರಂಗ’ ಚಿತ್ರವನ್ನು ನಿರ್ಮಿಸಿದ್ದ ಪ್ರಕಾಶ್​ ಈ ಚಿತ್ರದ ನಿರ್ಮಾಪಕರು.

    ಒಂದು ಮಗುವಿನ ಸುತ್ತ … ‘ಬ್ರಹ್ಮಕಮಲ’ಳಾದ ಅದ್ವಿತಿ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts