More

    ವಿಭಿನ್ನವಾಗಿ ನೋಡಿದಾಗಲೇ ಬದುಕು ಸುಲಭ, ಸಕ್ಸಸ್ ಜ್ಞಾನ ಸಂಸ್ಥಾಪಕ ಸುರೇಂದ್ರನ್ ಜಯಸೇಕರ್ ಅಭಿಮತ

    ಹುಬ್ಬಳ್ಳಿ: ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯ ಎಂಬುದಿಲ್ಲ. ನಾವು ಈ ಜೀವನವನ್ನು ವಿಭಿನ್ನವಾಗಿ ನೋಡುತ್ತ ಹೋದರೆ ಇಲ್ಲಿ ಎಲ್ಲವೂ ಸಾಧ್ಯವಾಗುತ್ತದೆ. ಇದಕ್ಕಾಗಿ ಒಂದಿಷ್ಟು ಸ್ವಯಂ ಆಲೋಚನೆ ಹಾಗೂ ಅದನ್ನು ಜಾರಿ ಮಾಡುವ ಗಟ್ಟಿತನ ಬೇಕು ಎಂದು ಸಕ್ಸಸ್ ಜ್ಞಾನ ಸಂಸ್ಥಾಪಕ ಸುರೇಂದ್ರನ್ ಜಯಸೇಕರ್ ಹೇಳಿದರು.

    ನಗರದ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಟೈ ಹುಬ್ಬಳ್ಳಿ ವತಿಯಿಂದ ಶ್ರೀದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ್ ಪ್ರಾಯೋಜಕತ್ವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳು, ವ್ಯಾಪಾರಸ್ಥರು, ವಿದ್ಯಾಥಿರ್ಗಳನ್ನು ಉದ್ದೇಶಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.

    ನೀವು ಏನಾದರೂ ಹೊಸತನ್ನು ಕಲಿಯಬೇಕಾದರೆ ಮೊದಲು ಅದರ ಬಗ್ಗೆ ಓದಿಕೊಳ್ಳಿ, ಬರೆಯಿರಿ, ಇನ್ನೂ ಆಳವಾಗಿ ಗೊತ್ತು ಮಾಡಿಕೊಳ್ಳಬೇಕಾದರೆ ಅದರ ಕುರಿತು ಟೀಚ್ (ಕಲಿಸಿ) ಮಾಡಿ, ಆಗ ಅದು ನಿಮ್ಮ ತಲೆಯಿಂದ ಹೊರಗೆ ಹೋಗಲ್ಲ ಎಂದರು.

    ನೀವು ಈ ಜಗತ್ತಿನಲ್ಲಿ ಬಲಿಷ್ಠರಾಗಬೇಕೆಂದುಕೊಂಡರೆ ನಿಸರ್ಗ ನಿಮಗೆ ಅವಕಾಶಗಳನ್ನು ಕೊಡುತ್ತದೆ. ಉದ್ಯಮದಲ್ಲಿ ಬೆಳೆಯಬೇಕಾದರೆ ಕೆಲವೊಮ್ಮೆ ನೀವು ಜಯಶಾಲಿಯಾಗಬಹುದು. ಕೆಲವೊಮ್ಮೆ ಅದರಿಂದ ಪಾಠ ಕಲಿಯಬಹುದು. ಆದರೆ, ಯಾವುದೇ ಕಾರಣಕ್ಕೂ ಕಳೆದುಕೊಂಡೆ ಎನ್ನಬಾರದು ಎಂದು ಸಲಹೆ ನೀಡಿದರು.

    ಅನೇಕ ಜನರು ಜೀವನದಲ್ಲಿ ಸವಾಲುಗಳು ಎದುರಾದಾಗ “ಓ ದೇವರೇ ಕಷ್ಟ ಕೊಡಲು ನಾನೇ ಬೇಕಿತ್ತಾ’ ಎಂದುಕೊಳ್ಳುತ್ತಾರೆ. ಇನ್ನಷ್ಟು ಕಷ್ಟ ಕೊಟ್ಟು ಬಿಟ್ಟರೆ ಜಜಿರ್ರಿತರಾಗುತ್ತಾರೆ. ಆದರೆ, ಸವಾಲುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಂಡವರು ಸವಾಲುಗಳನ್ನೇ ಮೆಟ್ಟಿಲಾಗಿ ಪರಿವತಿರ್ಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ.

    ಮೊದಲು ನಾವು ಬದುಕಿನ ಪ್ರತಿಯೊಂದು ಮಜಲಿನಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದನ್ನು ಕಲಿಯಬೇಕು. ತಪು$್ಪಗಳಾದಾಗ ಬೇರೊಬ್ಬರನ್ನು ದೂಷಿಸಬಾರದು. ಜೀವನ ಪರ್ಯಂತ ಕಲಿಯುತ್ತಲೇ ಇರುತ್ತೇನೆ ಎನ್ನುವವರು ಸವಾಲುಗಳನ್ನು ಸುಲಭವಾಗಿ ಸ್ವೀಕರಿಸುತ್ತಾರೆ.

    ಆಗ ಅವರು ಜಗತ್ತಿಗೆ ಅತ್ಯುತ್ತಮವಾದದನ್ನು ಕೊಡಲು ಸಾಧ್ಯವಾಗುತ್ತದೆ. ಅದೇ ರೀತಿ ಅವರು ಜಗತ್ತಿನ ಮೂಲೆಮೂಲೆಯಿಂದ ಉತ್ತಮವಾದದನ್ನು ತೆಗೆದುಕೊಂಡು ಬರುತ್ತಾರೆ ಎಂದರು.

    ಇಂತಹ ಪ್ರೇರಣಾದಾಯಕ ಮಾತುಗಳ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೆಳವಣಿಗೆ ಸಾಧಿಸಲು ಅಗತ್ಯವಾದ ಕೌಶಲಗಳು ಮತ್ತು ಒಳನೋಟಗಳ ಮೇಲೆ ಅವರು ಬೆಳಕು ಚೆಲ್ಲಿದರು.

    ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ ಪಾಟೀಲ, ಕಾರ್ಯದರ್ಶಿ ನಾಗರಾಜ ಕೊಟಗಿ, ಶ್ರೀದೇವಿ ರೂಗಿ, ಡಾ. ಶಂಕರ, ಸಂದೀಪ ಬಿಡಸಾರಿಯಾ, ಶಶಿಧರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts