ಹೊಸ ಅವತಾರದಲ್ಲಿ ವಿನಯ್ ರಾಜಕುಮಾರ್ … ಮೊದಲ ಬಾರಿಗೆ ರಫ್​ ಅಂಡ್​ ಟಫ್​ ಪಾತ್ರದಲ್ಲಿ ನಟನೆ

Pepe - Final 1
Published on

ಬೆಂಗಳೂರು: ವಿನಯ್​ ರಾಜಕುಮಾರ್​ ಬಹಳ ಆಸೆಪಟ್ಟು 'ಟೆನ್​' ಎಂಬ ಚಿತ್ರದಲ್ಲಿ ಬಾಕ್ಸರ್​ ಆಗಿ ನಟಿಸಿದ್ದರು. ಆದರೆ, ಚಿತ್ರ ಬಂದಿದ್ದು, ಹೋಗಿದ್ದು ಎರಡೂ ಗೊತ್ತಾಗಲಿಲ್ಲ. ಹೀಗಿರುವಾಗಲೇ, ವಿನಯ್​ ಅಭಿನಯದ ಇನ್ನೊಂದು ಹೊಸ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದಲ್ಲಿ ಹೊಸ ಅವತಾರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ವಿನಯ್​ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಹೆಸರು 'ಪೆಪೆ'. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ರಫ್​ ಅಂಡ್​ ಟಫ್​ ಪಾತ್ರ ನಿರ್ವಹಿಸಿದ್ದು, ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದಲ್ಲಿನ ವಿನಯ್​ ಫಸ್ಟ್​ ಲುಕ್​ ಬಿಡುಗಡೆಯಾಗಿದ್ದು, ಹೊಸ ವರ್ಷದ ಪ್ರಯುಕ್ತ ಇನ್ನೊಂದು ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

'ಪೆಪೆ' ಚಿತ್ರದಲ್ಲಿ ವಿನಯ್​ಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಿಕ್ಕಂತೆ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಮೆದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಮುಂತಾದವರು ಅಭಿನಯಿಸಿದ್ದಾರೆ. ಅಭಿಷೇಕ್​ ಕಾಸರಗೋಡು ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ.

ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರ ಮುಂತಾದ ಕಡೆ ‘ಪೆಪೆ’ ಚಿತ್ರೀಕರಣವಾಗಿದ್ದು, ಈ ವರ್ಷದ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಉದಯ್ ಮತ್ತು ಶ್ರೀರಾಮ್ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net