More

    ಮೃಗವಾದ ರಣಬೀರ್​ ಕಪೂರ್; ಮೊದಲ ಬಾರಿಗೆ ಆಕ್ಷನ್​ ಹೀರೋ ಆಗಿ ನಟನೆ

    ಮುಂಬೈ: ರಣಬೀರ್​ ಕಪೂರ್​ ಇದುವರೆಗೂ ಸಾಫ್ಟ್​ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆಕ್ಷನ್​ ಹೀರೋ ಆಗಿ ಕಾಣಿಸಿಕೊಳ್ಳಬೇಕು ಎಂಬ ಅವರ ಆಸೆ ಕೊನೆಗೂ ಈಗ ಈಡೇರಿದೆ.

    ಇದನ್ನೂ ಓದಿ: ಪವಿತ್ರಾ ಲೋಕೇಶ್​ ಮತ್ತು ನರೇಶ್​ ಇನ್ನು ಬೆಸ್ಟ್​ಫ್ರೆಂಡ್ಸ್​ ಅಲ್ಲ, ಗಂಡ-ಹೆಂಡ್ತಿ

    ‘ಅರ್ಜುನ್​ ರೆಡ್ಡಿ’ ಖ್ಯಾತಿಯ ನಿರ್ದೇಶಕ ಸಂದೀಪ್​ ವಂಗಾ ನಿರ್ದೇಶನದ ಚಿತ್ರದಲ್ಲಿ ರಣಬೀರ್​ ಕಪೂರ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊಸದಲ್ಲ. ಈ ಚಿತ್ರಕ್ಕೆ ‘ಅನಿಮಲ್​’ ಎಂಬ ಹೆಸರಿಟ್ಟಿರುವುದೂ ಗೊತ್ತಿರಬಹುದು. ಇದೊಂದು ಔಟ್​ ಅಂಡ್​ ಔಟ್​ ಆಕ್ಷನ್​ ಚಿತ್ರವಾಗಿದ್ದು, ಈ ಚಿತ್ರದ ರಣಬೀರ್​ ಕಪೂರ್​ ಅವರ ಫಸ್ಟ್​ ಲುಕ್​, ಹೊಸ ವರ್ಷದ ಪ್ರಯುಕ್ತ ಬಿಡುಡೆಯಾಗಿದೆ. ಈ ಪೋಸ್ಟರ್​ನಲ್ಲಿ ರಣಬೀರ್​ ಕೈ ಮತ್ತು ಮುಖಕ್ಕೆ ಗಾಯಗಳಾಗಿದ್ದು, ತಮ್ಮ ರಕ್ತಸಿಕ್ತ ಕೈಗಳಲ್ಲಿ ಕೊಡಲಿ ಹಿಡಿದು ಸಿಗರೇಟ್​ ಉರಿಸುತ್ತಿರುವ ಈ ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

    ಮೃಗವಾದ ರಣಬೀರ್​ ಕಪೂರ್; ಮೊದಲ ಬಾರಿಗೆ ಆಕ್ಷನ್​ ಹೀರೋ ಆಗಿ ನಟನೆ

    ಅಂದಹಾಗೆ, ‘ಅನಿಮಲ್​’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಹಿಂದಿಯಲ್ಲಿ ತಯಾರಾಗಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ರಣಬೀರ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅನಿಲ್​ ಕಪೂರ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಕಿಂಗ್ & ಕ್ವೀನ್’ ಆಗಿ ಬರುತ್ತಿದ್ದಾರೆ ಶ್ರೇಯಸ್ ಚಿಂಗ ಮತ್ತು ಇತಿ ಆಚಾರ್ಯ

    ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಟಿ-ಸಿರೀಸ್ ಮತ್ತು ಬದ್ರಕಾಳಿ ಪಿಕ್ಚರ್ಸ್​ನಡಿ ಭೂಷಣ್ ಕುಮಾರ್ ಮತ್ತು ಪ್ರಣಯ್ ರೆಡ್ಡಿ ವಾಂಗ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಫಸ್ಟ್​ ಲುಕ್​ ಜತೆಗೆ ಚಿತ್ರದ ಬಿಡುಗಡೆ ದಿನಾಂಕವೂ ಹೊರಬಿದ್ದಿದ್ದು, ‘ಅನಿಮಲ್​’ ಜಗತ್ತಿನಾದ್ಯಂತ ಆಗಸ್ಟ್​ 11, 2023ಕ್ಕೆ ಬಿಡುಗಡೆಯಾಗಲಿದೆ.

    ಮತ್ತೊಮ್ಮೆ ಗ್ಯಾಂಗ್​ಸ್ಟರ್​ ಆದ ಶಿವಣ್ಣ; ‘ಘೋಸ್ಟ್‌’ ಚಿತ್ರದ ಮೋಷನ್​ ಪೋಸ್ಟರ್​ ಬಿಡಗುಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts