More

    ಊಟಕ್ಕೂ ಮುನ್ನ ವಿಶಾಲ್​ ಹವ್ಯಾಸ ವೈರಲ್​! ಟ್ರೋಲ್​ಗಳಿಗೆ ಖಡಕ್​ ತಿರುಗೇಟು ಕೊಟ್ಟ​ ನಟ

    ಚೆನ್ನೈ: ಕಾಲಿವುಡ್​​ ಸೂಪರ್​ಸ್ಟಾರ್​ ವಿಶಾಲ್ ಅವರು​ ತಮಿಳುನಾಡು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಸಿನಿ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಅವರ ಅನೇಕ ಚಿತ್ರಗಳು ಬಾಲಿವುಡ್​ಗೆ ಡಬ್​​ ಆಗಿವೆ. ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ವಿಶಾಲ್​ ಗುರುತಿಸಿಕೊಂಡಿದ್ದಾರೆ.

    ತಾಜಾ ಸಂಗತಿ ಏನೆಂದರೆ, ವಿಶಾಲ್​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಊಟ ಮಾಡುವ ಮುನ್ನ ವಿಶಾಲ್​ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯವಿದೆ. ಮೂರು ಧರ್ಮಗಳ ದೇವರಿಗೂ ವಿಶಾಲ್​ ಒಂದೇ ಪ್ರಾರ್ಥನೆಯಲ್ಲಿ ನಮಸ್ಕರಿಸಿದ್ದಾರೆ. ಪಕ್ಕದಲ್ಲಿ ಕುಳಿತ ಯೋಗಿಬಾಬು ವಿಶಾಲ್​ ಅವರನ್ನು ನೋಡಿ ಒಂದು ರೀತಿಯ ಮುಖಭಾವ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ ವಿಶಾಲ್​ ಪ್ರಸ್ತುತ ಹರಿ ನಿರ್ದೇಶನದ ರತ್ನಮ್ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಏಪ್ರಿಲ್ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಶೂಟಿಂಗ್​ ನಡುವೆ ಊಟದ ಸಂದರ್ಭದಲ್ಲಿ ಮೊಬೈಲ್​ನಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದ್ದು, ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತದೆ. ಪರ-ವಿರೋಧ ಚರ್ಚೆಯು ಸಹ ನಡೆಯುತ್ತಿದೆ.

    ಟ್ರೋಲ್​ಗೆ ವಿಶಾಲ್​ ಉತ್ತರ
    ವಿಡಿಯೋವನ್ನು ಟ್ರೋಲ್​ ಮಾಡುತ್ತಿರುವವರಿಗೆ ವಿಶಾಲ್​ ತಿರುಗೇಟು ನೀಡಿದ್ದಾರೆ. ರತ್ನಮ್​ ಚಿತ್ರದ ಕಾರ್ಯಕ್ರಮವೊಂದರಲ್ಲಿ ಟ್ರೋಲ್​ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ವಿಶಾಲ್​, ನಾನಿದನ್ನು ಬಹಳ ವರ್ಷಗಳಿಂದಲೂ ಮಾಡುತ್ತಾ ಬರುತ್ತಿದ್ದೇನೆ. ಟ್ರೋಲ್​ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆಲ್ಲ ವಿವರಣೆ ನೀಡುವ ಅಗತ್ಯವೂ ಇಲ್ಲ ಎಂದಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ರತ್ನಮ್​ ಬಿಡುಗಡೆಗೆ ಎದುರು ನೋಡುತ್ತಿರುವ ವಿಶಾಲ್​, ಸೂಪರ್​ ಹಿಟ್​ ತುಪ್ಪರಿವಾಲನ್​ ಸಿನಿಮಾದ ಎರಡನೇ ಭಾಗಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

    ಶೂಟಿಂಗ್​ ವೇಳೆ ಹಾವು ಕಚ್ಚಿ ಒಬ್ಬ ಸತ್ತೇ ಹೋದ; ದೇವಿ ಚಿತ್ರದ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಪ್ರೇಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts