"ಕಂಗನಾಗೆ ಹೊಡೆದ ಸಿಬ್ಬಂದಿಗೆ ನಾನು ಕೆಲಸ ಕೊಡುತ್ತೇನೆ" ಎಂದು ಹೇಳಿದ ಪ್ರಸಿದ್ಧ ಗಾಯಕ!

Untitled-design-34-1
Published on

ನಟಿ-ರಾಜಕಾರಣಿ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿರುವುದು ವ್ಯಾಪಕ ಗಮನ ಸೆಳೆದಿದೆ. ಘಟನೆ ಬಳಿಕ ಕಂಗನಾ ರಣಾವತ್ ತಾನು ಸೇಫ್ ಆಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಈ ಘಟನೆ ಬಳಿಕ ಸಿಐಎಸ್​ಎಫ್​ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಈ ಮಧ್ಯೆ ವಿವಾದದ ಬಗ್ಗೆ ಪ್ರಸಿದ್ಧ ಸಂಗೀತ ಸಂಯೋಜಕ ಮತ್ತು ಗಾಯಕ ವಿಶಾಲ್ ದಾದ್ಲಾನಿ ಪ್ರತಿಕ್ರಿಯಸಿದ್ದು, ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್​ಎಫ್​​​ ಸಿಬ್ಬಂದಿ ಬೆಂಬಲ ನೀಡಿರುವುದು ಕಂಡುಬಂದಿದೆ.

"ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ನಾನು ಈ ಸಿಐಎಸ್‌ಎಫ್‌ನ ಸಿಬ್ಬಂದಿ ಕೋಪದ ಅಗತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಸಿಬ್ಬಂದಿ ವಿರುದ್ಧ ಯಾವುದೇ ಕ್ರಮಕೈಗೊಂಡರೆ. ಅವರು ಅದನ್ನು ಸ್ವೀಕರಿಸಲು ಬಯಸಿದರೆ ಅವರಿಗೆ ಕೆಲಸ ಕಾಯುತ್ತಿದೆ ಎಂದು ನಾನು ಹೇಳಲು ಬಯಸುತ್ತೇನೆ. ಜೈಹಿಂದ್​.. ಜೈ ಜವಾನ್​.. ಜೈ ಕಿಸಾನ್​​.." ಎಂದು ವಿಶಾಲ್​ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​​)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net