More

    ಭಾರತ-ತೈವಾನ್​ ಉಭಯ ನಾಯಕರ ಮಾತುಕತೆ : ವಿರೋಧ ವ್ಯಕ್ತಪಡಿಸಿದ ಚೀನಾಕ್ಕೆ ತೈವಾನ್​ ಉತ್ತರಿಸಿದ್ದು ಹೀಗೆ

    ನರೇಂದ್ರ ಮೋದಿ ಮತ್ತು ತೈವಾನ್​ ಅಧ್ಯಕ್ಷ ಲಾಯ್​ ಚಿಂಗ್​ ಟೆ ನಡುವಿನ ಅಭಿನಂದನಾ ಸಂದೇಶಗಳ ವಿನಿಮಯಕ್ಕೆ ಚೀನಾದ ಆಕ್ಷೇಪವನ್ನು ತೈವಾನ್​ ಶುಕ್ರವಾರ(ಜೂನ್​​ 7) ತಿರಸ್ಕರಿಸಿದೆ. ವಿಶ್ವ ಸಮುದಾಯವನ್ನು ದಾರಿ ತಪ್ಪಿಸಲು ಚೀನಾ ರಾಜಕೀಯ ಒತ್ತಡ ಹೇರುತ್ತಿದೆ ಮತ್ತು ತಪ್ಪು ಕಲ್ಪನೆಗಳನ್ನು ಹರಡುತ್ತಿದೆ ಎಂದು ತೈವಾನ್​ ಹೇಳಿದೆ.

    ಇದನ್ನು ಓದಿ: ಕೆಲವರು ಮತ ಹಾಕಿದರೆ ಕೆಲವರು ಕಪಾಳಮೋಕ್ಷ ಮಾಡುತ್ತಾರೆ : ಸಂಜಯ್​ ರಾವತ್​

    ವಾಸ್ತವವಾಗಿ ತೈವಾನ್ ಅಧ್ಯಕ್ಷರು ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಗೆಲುವಿಗಾಗಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರು ತೈವಾನ್​ನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರ. ಮೋದಿ ಅವರ ಈ ಉತ್ತರದಿಂದ ಚೀನಾ ಕೆರಳಿದೆ.

    ತೈವಾನ್ ಅಧಿಕಾರಿಗಳ ರಾಜಕೀಯ ನಡೆಗಳನ್ನು ನವದೆಹಲಿ ವಿರೋಧಿಸಬೇಕು ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿತು. ತೈವಾನ್​ ಚೀನಾದ ಅವಿಭಾಜ್ಯ ಪ್ರಾಂತ್ಯವಾಗಿದೆ. ಭೂಭಾಗದೊಂದಿಗೆ ಮರುಸೇರ್ಪಡೆಯಾಗಬೇಕು ಎಂಬುದು ಅದರ ಉದ್ದೇಶವಾಗಿದೆ.

    ಮೂರನೇ ಅವಧಿಗೆ ಮೋದಿಯವರನ್ನು ಅಭಿನಂದಿಸಿದ ವಿಶ್ವ ನಾಯಕರಲ್ಲಿ ಲಾಯ್​ ಚಿಂಗ್​ ಟೆ ಒಬ್ಬರು. ಕಳೆದ ತಿಂಗಳಷ್ಟೇ ಅವರು ತೈವಾನ್​ ಅಧ್ಯಕ್ಷರಾಗಿದ್ದಾರೆ. ತಮ್ಮ ಎಕ್ಸ್​​ ಖಾತೆಯ ಪೋಸ್ಟ್​​ನಲ್ಲಿ ಚುನಾವಣೆಯಲ್ಲಿ ಜಯಗಳಿಸಿದ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್-ಭಾರತ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ವಲಯಗಳಲ್ಲಿ ಸಹಯೋಗವನ್ನು ವಿಸ್ತರಿಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.

    ಈ ಸಂದೇಶಕ್ಕ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ, ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಸಹಭಾಗಿತ್ವದತ್ತ ಕೆಲಸ ಮಾಡುವ ಮೂಲಕ ಇನ್ನಷ್ಟು ನಿಕಟ ಸಂಬಂಧಗಳಿಗಾಗಿ ನಾವು ಎದುರು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಸಿದರು. (ಏಜೆನ್ಸೀಸ್​)

    VIDEO | ಗ್ರೌಂಡ್​​ನಲ್ಲೇ ಅಭಿಮಾನಿಯೊಂದಿಗೆ ಜಗಳಕ್ಕಿಳಿದ ಪಾಕ್​​ ಬ್ಯಾಟ್ಸ್​ಮನ್​​ !

    See also  ಕಣಕಟ್ಟೆ ಶಾಲೆಗೆ ಪೀಠೋಪಕರಣ ದೇಣಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts