More

    ವಿರಾಟ್​ ಕೊಹ್ಲಿ ಕೊಟ್ಟ ವಿಶೇಷ ಉಡುಗೊರೆ ಪಡೆದು ರಿಂಕು ಸಿಂಗ್ ಹೇಳಿದ್ದಿಷ್ಟು…

    ನವದೆಹಲಿ: ವಿರಾಟ್ ಕೊಹ್ಲಿ ಬ್ಯಾಟಿಂಗ್​ಗಿಂತಲೂ ಫೀಲ್ಡಿಂಗ್‌ ಅಂತಾ ಬಂದಾಗ ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಾರೆ. ಹಾಗೆಯೇ ಎದುರಾಳಿಗಳು ಅವರನ್ನು ಕೆರಳಿಸಿದರೆ ಬ್ಯಾಟ್‌ನಿಂದಲೇ ತಕ್ಕ ಉತ್ತರ ಕೊಡುತ್ತಾರೆ. ಕೊಹ್ಲಿ ಕೋಪಿಷ್ಠ ಅಂದುಕೊಂಡರೆ ಅದು ತಪ್ಪು. ಏಕೆಂದರೆ, ಕೊಹ್ಲಿ ಎಷ್ಟು ಮೃದು ಸ್ವಭಾವದವರು ಎಂಬುದು ನಮಗೆಲ್ಲ ಗೊತ್ತೇ ಇದೆ.

    ಕ್ರಿಕೆಟ್​ನ ಕೆಲವೊಂದು ಟಿಪ್ಸ್​ಗಳ ಬಗ್ಗೆ ಯುವ ಆಟಗಾರರಿಗೆ ಹೇಳುವ ಮೂಲಕ ಯುವಕರಿಗೆ ಸಹಾಯ ಮಾಡುತ್ತಾರೆ. ಅಲ್ಲದೆ, ಯುವ ಆಟಗಾರರಿಗೆ ವಿಶೇಷ ಉಡುಗೊರೆಯನ್ನು ನೀಡುವ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಇತ್ತೀಚೆಗಷ್ಟೇ ಕೋಲ್ಕತ ನೈಟ್​ ರೈಡರ್ಸ್​ ತಂಡದ ಬ್ಯಾಟರ್ ರಿಂಕು ಸಿಂಗ್​ಗೆ ರನ್ ಮಷಿನ್ ಕೊಹ್ಲಿ ಅವರಿಂದ ಅನಿರೀಕ್ಷಿತ ಉಡುಗೊರೆಯೊಂದು ಸಿಕ್ಕಿದೆ. ಆ ಖುಷಿಯನ್ನು ರಿಂಕು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

    ರಿಂಕು ಸಿಂಗ್ ಕಳೆದ ವರ್ಷದ ಐಪಿಎಲ್ ಸೀಸನ್​ನಲ್ಲಿ ತಮ್ಮ ಬ್ಯಾಟಿಂಗ್​ ಅಬ್ಬರದ ಮೂಲಕ ಎಲ್ಲರ ಗಮನ ಸೆಳೆದರು. ಅದೇ ವೇಗದಲ್ಲಿ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಪಡೆದರು ಮತ್ತು ಅಲ್ಲಿಯೂ ತಮ್ಮ ಸ್ಫೋಟಕ ಆಟವನ್ನು ಸಾಬೀತುಪಡಿಸಿದರು ಮತ್ತು ಏಕದಿನ ಪಂದ್ಯಕ್ಕೂ ರಿಂಕು ಪದಾರ್ಪಣೆ ಮಾಡಿದರು. ಈ ಯುವ ಆಟಗಾರ ಸದ್ಯ ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಆಡುತ್ತಿದ್ದಾರೆ. ನಿನ್ನೆ (ಮಾರ್ಚ್​ 29) ನಡೆದ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಿಂಕು 5 ರನ್ ಗಳಿಸಿ ಅಜೇಯರಾಗಿ ಉಳಿದಿದರು. ಅಷ್ಟರಲ್ಲಾಗಲೇ ಕೆಕೆಆರ್​ ಗೆದ್ದಿದ್ದರಿಂದ ಬ್ಯಾಟಿಂಗ್​ನಲ್ಲಿ ಅಬ್ಬರಿಸಲು ರಿಂಕುಗೆ ಅವಕಾಶವೇ ಸಿಗಲಿಲ್ಲ.

    Virat Kohli

    ಈ ಪಂದ್ಯದ ಬಳಿಕ ರನ್ ಮೆಷಿನ್ ವಿರಾಟ್ ಕೊಹ್ಲಿ ರಿಂಕು ಸಿಂಗ್​ಗೆ ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾರೆ. ರಿಂಕು ಬಳಿ ಹೋಗಿ ಬ್ಯಾಟ್ ಉಡುಗೊರೆಯಾಗಿ ನೀಡಿದ್ದಲ್ಲದೆ ಅಮೂಲ್ಯ ಸಲಹೆಯನ್ನೂ ಕೊಹ್ಲಿ ನೀಡಿದ್ದಾರೆ. ಈ ವಿಚಾರವನ್ನು ರಿಂಕು ಸಿಂಗ್​ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಮೂಲ್ಯವಾದ ಸಲಹೆಗಳನ್ನು ನೀಡಿ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಧನ್ಯವಾದಗಳು ವಿರಾಟ್ ಭಾಯ್ ಎಂದಿರುವ ರಿಂಕು, ಬ್ಯಾಟ್ ತೆಗೆದುಕೊಂಡ ನಂತರ ಕೊಹ್ಲಿ ಅವರನ್ನು ಅಪ್ಪಿಕೊಂಡಿರುವ ಫೋಟೋವನ್ನು ಸಹ ಪೋಸ್ಟ್​ ಮಾಡಿದ್ದಾರೆ.

    ಅಂದಹಾಗೆ ಯುವ ಆಟಗಾರರಿಗೆ ವಿರಾಟ್ ಕೊಹ್ಲಿ ಈ ರೀತಿ ಉಡುಗೊರೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಆಟಗಾರರಿಗೆ ಉಡುಗೊರೆ ನೀಡಿದ್ದಾರೆ ಮತ್ತು ರಿಂಕು ಸಿಂಗ್‌ಗೆ ವಿರಾಟ್‌ನ ಅನಿರೀಕ್ಷಿತ ಉಡುಗೊರೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಆರ್​​ಸಿಬಿಗೆ ಸೇರಿಕೊಳ್ಳಲಿದ್ದಾರೆ ರೋಹಿತ್​ ಶರ್ಮ!? ನಾಯಕತ್ವವೂ ಕೂಡ ಹಿಟ್​ಮ್ಯಾನ್​ ಹೆಗಲಿಗೆ

    ಇಂದು ಹೃದಯಾಘಾತದಿಂದ ಮೃತಪಟ್ಟ ಡೇನಿಯಲ್​ ಬಾಲಾಜಿ ಕನ್ನಡದ ಖ್ಯಾತ ನಟನ ಸಹೋದರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts