ಕೊಹ್ಲಿ ಮೊಬೈಲ್ ನೋಡಿದ ಅಭಿಮಾನಿಗಳಿಗೆ ಶಾಕ್; ವಿಡಿಯೋ ಕಾಲ್​ನಲ್ಲಿ ಯಾರಿದ್ದರು ನೀವೇ ನೋಡಿ..!

Virat Kohli
Published on

ನವ ದೆಹಲಿ: ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕೊಹ್ಲಿ ಎಲ್ಲೇ ಹೋದ್ರೂ ನೆಚ್ಚಿನ ಆಟಗಾರರನನ್ನು ನೋಡಲು, ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಇದೀಗ ಸೌತ್​ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯ ಆಡಲು ವಿರಾಟ್ ಕೊಹ್ಲಿ ಗುವಾಹಟಿಗೆ ಬಂದಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯನ್ನು ನೋಡಲು ಫ್ಯಾನ್ಸ್​ ಮುಗಿಬಿದ್ದಿದ್ದಾರೆ.

ತಂಡದ ಜತೆಗೂಡಿ ವಿರಾಟ್ ಕೊಹ್ಲಿ ಹೊಟೇಲ್​ಗೆ ಬಸ್ಸಿನಲ್ಲಿ ಆಗಮಿಸಿದ್ದಾರೆ. ಈ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಭಾರತ ತಂಡದ ಸದಸ್ಯರಿದ್ದ ಬಸ್ ಬರುತ್ತಿದ್ದಂತೆ ಆಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಲು ಆರಂಭಿಸಿದ್ದಾರೆ. ಅಭಿಮಾನಿಗಳ ಜೋಶ್ ನೋಡುತ್ತಿದ್ದಂತೆ ವಿರಾಟ್ ಕೊಹ್ಲಿ ಖುಷಿಯಾಗಿದ್ದಾರೆ. ಕೂಡಲೇ ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ನಗುತ್ತಲೇ ಕೈ ಬೀಸಿದ್ದಾರೆ. ಈ ವೇಳೆ ತಮ್ಮ ಮೊಬೈಲ್ ಪ್ರದರ್ಶಿಸಿದ್ದಾರೆ.

ಅಭಿಮಾನಿಗಳತ್ತ ವಿರಾಟ್ ಕೊಹ್ಲಿ ತನ್ನ ಮೊಬೈಲ್ ಪ್ರದರ್ಶಿಸುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಅನುಷ್ಕಾ ಶರ್ಮ. ಹೌದು, ಬಸ್ಸಿನಲ್ಲಿ ಬರುತ್ತಿರುವಾಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಾ ಬರುತ್ತಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳತ್ತ ಕೊಹ್ಲಿ ಮೊಬೈಲ್ ಪ್ರದರ್ಶಿಸಿದ್ದಾರೆ. ಅಭಿಮಾನಿಗಳಿಗೆ ವಿಡಿಯೋ ಕಾಲ್​ನಲ್ಲಿ ನಟಿ ಅನುಷ್ಕಾ ಶರ್ಮ ಕಾಣುತ್ತಿದ್ದಂತೆ ಮತ್ತಷ್ಟು ಖುಷಿಯಾಗಿದ್ದಾರೆ. ಅಭಿಮಾನಿಗಳ ಹುರುಪು ಕಂಡ ಕೊಹ್ಲಿ ಕೂಡ ನಗುತ್ತಲೇ ಮುಂದೆ ಸಾಗಿದ್ದಾರೆ.

ಸದ್ಯ ವಿರಾಟ್​ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮ ಚಡ್ಕಾ ಎಕ್ಸ್​ಪ್ರೆಸ್​ ಸಿನಿಮಾದಲ್ಲಿ ನಟಿಸುತ್ತಿದ್ದು, ಲಂಡನ್​ನಲ್ಲಿ ಶೂಟಿಂಗ್​ನಲ್ಲಿ ಬಿಝಿಯಾಗಿದ್ದಾರೆ. ಅನುಷ್ಕಾ ತಾಯಿಯಾದ ಬಳಿಕ ನಟಿಸುತ್ತಿರುವ ಮೊದಲ ಸಿನಿಮಾ ಇದು. ಭಾರತದ ಮಹಿಳಾ ಕ್ರಿಕೆಟ್ ತಂಡದ ಹಿರಿಯ ವೇಗೆ ಜುಲಾನಾ ಗೋಸ್ವಾಮಿ ಬದುಕಿನ ಕಥೆ ಆಧರಿಸಿದ ಸಿನಿಮಾ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net