ಬೆನ್ನು ನೋವಿನ ಸಮಸ್ಯೆ; ವಿಶ್ವಕಪ್​ ತಂಡದಿಂದ ವೇಗಿ ಬುಮ್ರಾ ಹೊರಕ್ಕೆ

Bumrah
Published on

ನವ ದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗೆ ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಭಾರತ ತಂಡಕ್ಕೆ ಆಘಾತವಾಗಿದೆ. ತಂಡದ ಪ್ರಮುಖ ವೇಗೆ ಜಸ್ಪ್ರೀತ್ ಬುಮ್ರಾ ಬೆನ್ನು ನೋವು ಕಾರಣದಿಂದ ವಿಶ್ವಕಪ್​ ತಂಡದಿಂದ ಹೊರ ಬಿದ್ದಿದ್ದಾರೆ.

ಬುಮ್ರಾ ಟಿ-20 ವಿಶ್ವಕಪ್​ ಭಾರತ ತಂಡದ ಟ್ರಂಪ್​​ಕಾರ್ಡ್​ ಬೌಲರ್ ಆಗಿದ್ದರು. ಹೀಗಾಗಿ ಭಾರತಕ್ಕೆ ಸರಣಿ ಆರಂಭಕ್ಕೂ ಮೊದಲು ಹಿನ್ನಡೆಯಾಗಿದೆ. ಇಂಜುರಿ ಸಮಸ್ಯೆಯಿಂದ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್​ ಸರಣಿಯಿಂದಲೂ ಬುಮ್ರಾ ಹಿಂದೆ ಸರಿದಿದ್ದರು. ನಂತರ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ತಂಡ ಕೂಡಿಕೊಂಡಿದ್ದರು. ಸದ್ಯ ನಡೆಯುತ್ತಿರುವ ಸೌತ್​ ಆಫ್ರಿಕಾ ವಿರುದ್ಧದ ತವರಿನ ಸರಣಿಯಿಂದ ಅರ್ಧದಿಂದಲೇ ಹೊರನಡೆದಿದ್ದಾರೆ.

ಏಷ್ಯಾಕಪ್​ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಸಮಸ್ಯೆಯಾಗಿ ಪರಿಣಮಿಸಿದ್ದು ಡೆತ್ ಓವರ್ ಬೌಲಿಂಗ್. ಭಾರತದ ಬೌಲರ್​ಗಳು ಡೆತ್ ಓವರ್​ನಲ್ಲಿ ಎದುರಾಳಿ ತಂಡ ರನ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಕೂಡಾ ಡೆತ್ ಓವರ್​ನಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಬುಮ್ರಾ ಲಭ್ಯತೆ ಟಿ-20 ವಿಶ್ವಕಪ್​ ದೃಷ್ಟಿಯಿಂದ ಭಾರತ ತಂಡಕ್ಕೆ ಪ್ರಮುಖವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net