More

    ಕೆಸರಿನಲ್ಲಿ ಹೂತು ಹೋದ ಲಾರಿ; ಮುಂದೆ ತಳ್ಳಿದ ಆನೆ

    ಪಂಜಾಬ್: ಕೆಸರು ತುಂಬಿದ ರಸ್ತೆಯಲ್ಲಿ ವಾಹನಗಳು ಹುಗಿಯುವುದು ಸಾಮಾನ್ಯ. ಹೀಗಾದಾಗ ಕ್ರೇನ್​ ಬಳಸಿ ವಾಹನವನ್ನು ಮೇಲೆತ್ತಲಾಗುತ್ತದೆ. ಆದರೆ ಅಮೃತ್​​ಸರ ಸಮೀಪದ ಹಳ್ಳಿಯೊಂದರಲ್ಲಿ ಜನರು ಆನೆಯನ್ನು ಬಳಸಿ, ಕೆಸರಿನಲ್ಲಿ ಹೂತು ಹೋಗಿದ್ದ ಲಾರಿಯನ್ನು ಚಲಿಸುವಂತೆ ಮಾಡಿದ್ದಾರೆ. ಬಲಶಾಲಿ ಆನೆ ದೊಡ್ಡ ಗಾತ್ರದ ಲಾರಿಯನ್ನು ತಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕೆಸರಿನ ರಸ್ತೆಯಲ್ಲಿ ಲಾರಿಯೊಂದು ಹೂತು ನಿಂತಿತ್ತು. ಮುಂದೆ ಚಲಿಸುವಂತೆ ಮಾಡಲು ಜನರು ಲಾರಿಯನ್ನು ತಳ್ಳಿದ್ದಾರೆ. ಆದರೆ ಲಾರಿಯನ್ನು ಮುಂದೆ ತಳ್ಳಲು ಜನರಿಂದ ಮಾತ್ರ ಸಾಧ್ಯವಾಗಿಲ್ಲ. ಈ ಸಂದರ್ಭ ಜನರ ಸಹಾಯಕ್ಕೆ ಬಂದದ್ದು, ಗಜರಾಜ. ನೇರವಾಗಿ ಗಜರಾಜ ತನ್ನೆಲ್ಲಾ ಶಕ್ತಿ ಹಾಕಿ ಲಾರಿ ಮುಂದಕ್ಕೆ ಚಲಿಸುವಂತೆ ಮಾಡಿದ್ದಾನೆ.

    ಸಿಖ್ಖರ ತಂಡವೊಂದು ದಸರಾ ಹಬ್ಬದ ಪ್ರಯುಕ್ತ ಅಮೃತ್​ಸರದಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿತ್ತು. ಇವರೆಲ್ಲರೂ ತಮ್ಮ ಸಾಮಾಗ್ರಿಗಳೊಂದಿಗೆ ಲಾರಿಯಲ್ಲಿ ಸಾಗುತ್ತಿದ್ದರು. ಈ ವೇಳೆ ಮಳೆ ಎದುರಾಗಿದೆ. ಹೀಗಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದರಿಂದ ಲಾರಿ ಹೂತು ಹೋಗಿದೆ. ಈ ವೇಳೆ ನಮ್ಮ ತಂಡದ ಸದಸ್ಯನಾಗಿದ್ದ ಗಜರಾಜ ಸಹಾಯ ಮಾಡಿದ್ದಾನೆ ಎಂದು ತಂಡದ ಸದಸ್ಯ ಗುರುದೇವ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts