VIDEO| ಡೆಲ್ಲಿ ವಿರುದ್ಧ ಕೊಹ್ಲಿ ಶತಕ ಸಿಡಿಸಿದರೆ ಅದು ದಾದಾಗೆ ಸಂದ ಗೌರವ: ಶ್ರೀಶಾಂತ್​

virat kohli saurav ganguly
Published on

ನವದೆಹಲಿ: ಹಾಲಿ ಐಪಿಎಲ್​ ಋತುವಿನಲ್ಲಿ ಮನರಂಜನೆಯ ಜೊತೆ ಜೊತೆಗೆ ಆಟಗಾರರು ಹಾಗೂ ತಂಡದ ಸದಸ್ಯರ ನಡುವಿನ ಮನಸ್ತಾಪಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ.

ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ನಡೆದ ಪಂದ್ಯದ ವೇಳೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ವಿರಾಟ್​ ಕೊಹ್ಲಿ ನಡುವಿನ ಮನಸ್ತಾಪ ಬಹಿರಂಗವಾಗಿ ಸ್ಪೋಟಗೊಂಡಿತ್ತು.

ಇನ್ನು ರೈವಲ್​ರಿ ವೀಕ್​ನಲ್ಲಿ ಡೆಲ್ಲಿ ಹಾಗೂ ಬೆಂಗಳೂರು ಶನಿವಾರ ಎರಡನೇ ಬಾರಿ ಮುಖಾಮುಖಿಯಾಗುತ್ತಿದ್ದು ಈ ಬಗ್ಗೆ ಭಾರತ ಕ್ರಿಕೆಟ್​ ತಂಡದ ಮಾಜಿ ವೇಗಿ ಶ್ರೀಶಾಂತ್​ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಶತಕವನ್ನು ಅರ್ಪಿಸಬೇಕು

ಶನಿವಾರ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶತಕ ಸಿಡಿಸುವ ಮೂಲಕ ಸೌರವ್​ ಗಂಗೂಲಿ ಅವರಿಗೆ ಅರ್ಪಿಸಬೇಕು ಇದು ಅವರಿಗೆ ನೀಡುವ ಸೂಕ್ತ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್​ ಕೊಹ್ಲಿ ಹಾಗೂ ಡೇವಿಡ್​ ವಾರ್ನರ್​ ನಡುವಿನ ಪಂದ್ಯವನ್ನು ನೋಡುವುದೇ ಒಂದು ವಿಶೇಷ. ಏಕೆಂದರೆ ಇ ಇಬ್ಬರು ಆಟಗಾರರು ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ.

ವಿರಾಟ್​ ತಮ್ಮ ತವರು ರಾಜ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಸೌರವ್​ ಗಂಗೂಲಿ ಅವರಿಗೆ ವಿಶೇಷ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net