ಪಟ್ನಾ: ರಾಷ್ಟ್ರೀಯ ಜನತಾ ದಳದ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಆಗಿಂದಾಗೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು ಮತ್ತು ಭಾರತ ತಂಡದಲ್ಲಿರುವ ಅನೇಕರು ತಮ್ಮ ಬ್ಯಾಚ್ಮೇಟ್ಗಳೆಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಬಗ್ಗೆ ಮಾತನಾಡಿರುವ ತೇಜಸ್ವಿ, ನಾನು ಕ್ರಿಕೆಟಿಗನಾಗಿದ್ದೆ ಮತ್ತು ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿರಾಟ್ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ ಅನೇಕ ಆಟಗಾರರು ನನ್ನ ಬ್ಯಾಚ್ಮೇಟ್ಗಳಾಗಿದ್ದರು. ಆದರೆ, ಇದರ ಬಗ್ಗೆ ಯಾರೂ ಕೂಡ ಯಾಕೆ ಮಾತನಾಡುವುದಿಲ್ಲ.
ಇದನ್ನೂ ಓದಿ: ಆತ ಹಠಮಾರಿ ಯಾರ ಸಲಹೆಯನ್ನು ಸ್ವೀಕರಿಸಲ್ಲ; ಬಾಂಗ್ಲಾ ಸರಣಿಗೂ ಮುನ್ನ ಮಾಜಿ ಆಟಗಾರ ಹೇಳಿದ್ದು ಯಾರ ಬಗ್ಗೆ ಗೊತ್ತಾ?
ನಾನು ಒಬ್ಬ ಒಳ್ಳೆಯ ಕ್ರಿಕಟಿಗನಾಗಿದ್ದೆ. ಆದರೆ, ಗಾಯದ ಸಮಸ್ಯೆಯಿಂದ ನಾನು ಕ್ರಿಕೆಟ್ಅನ್ನು ತೊರೆಯಬೇಕಾಗಿ ಬಂತು. ನಾನು ವಿರಾಟ್ ಒಟ್ಟಿಗೆ ದೆಹಲಿ ಪರ ಆಡಿದ್ದೇವೆ. ನನ್ನ ವೃತ್ತಿಜೀವನದಲ್ಲಿ ವತ್ತಿಜೀವನದಲ್ಲಿ ಒಟ್ಟು 1 ಪ್ರಥಮ ದರ್ಜೆ, 2 ಲಿಸ್ಟ್ ಎ ಮತ್ತು 4 ಟಿ20 ಪಂದ್ಯಗಳನ್ನು ಎಂದು ತೇಜಸ್ವಿ ಯಾದವ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇತ್ತ ತೇಜಸ್ವಿ ಯಾದವ್ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದ್ದು, ನೆಟ್ಟಿಗರು ಅವರನ್ನು ಹೀನಾಯವಾಗಿ ಟ್ರೋಲ್ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಏತಕ್ಕೆ ಈವರೆಗೂ ಕಪ್ ಗೆದ್ದಿಲ್ಲ ಎಂಬುದು ನಮಗೆ ಈಗ ಅರ್ಥವಾಯಿತು. ಅವರು ಡ್ರೀಮ್ 11ನಲ್ಲಿ ತಾವು ಕಟ್ಟಿದ ತಂಡದ ಬಗ್ಗೆ ಮಾತನಾಡುತ್ತಿರಬೇಕು ಎಂದು ಕಮೆಂಟ್ ಮಾಡಿ ಟೀಕಿಸಿದ್ದಾರೆ.