ನವದೆಹಲಿ: ನಾವು ನೋಡಿದಂತೆ ಯಾವುದಾದರೂ ಅಂತಾರಾಷ್ಟ್ರೀಯ ಟೂರ್ನಿ ಅಥವಾ ಸರಣಿ ಆರಂಭವಾಗುವುದಕ್ಕೂ ಮುನ್ನ ಮಾಜಿ ಹಾಗೂ ಹಾಲಿ ಆಟಗಾರರು ಹೇಳಿಕೆಗಳನ್ನು ನೀಡುವುದು ಸಹಜ. ಅದೇ ರೀತಿ ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಸ್ ಸರಣಿ ಆರಂಭವಾಗುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಸರಣಿ ಕುರಿತಂತೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ಮಾತನಾಡಿದ್ದು, ಗೌತಮ್ ಗಂಭೀರ್ ಕುರಿತು ಮಾತನಾಡಿದ್ದಾರೆ.
ಆತ ಹಠಮಾರಿ ಯಾವುದೇ ವಿಚಾರಗಳನ್ನು ಸುಮ್ಮನೇ ಹಾಗೆ ಹೋಗಲು ಬಿಡುವವನಲ್ಲ. ಉದಾಹರಣೆಗೆ ಸೂರ್ಯಕುಮಾರ್ ಯಾದವ್ ಟಿ20 ಮಾದರಿಗೆ ನಾಯಕನಾದ ಹಾಗೆ ಇನ್ನೂ ಅನೇಕ ಅಚ್ಚರಿಯ ಬೆಳವಣಿಗೆಗಳು ತಂಡದಲ್ಲಿ ನಡೆಯುವುದಂತು ಪಕ್ಕಾ. ಏಕೆಂದರೆ ಆತ ಯಾರ ಸಲಹೆಯನ್ನು ಸ್ವೀಕರಿಸುವುದಿಲ್ಲ ಮತ್ತು ಆತನ ಕಾರ್ಯವೈಖರಿಯನ್ನು ಬದಲಾಯಿಸುವುದಿಲ್ಲ.
ಇದನ್ನೂ ಓದಿ: ಚಿನ್ನದ ಹುಡುಗನಿಗೆ ಮತ್ತೊಮ್ಮೆ ನಿರಾಸೆ; ಕೇವಲ 0.01 ಮೀ. ಅಂತರದಲ್ಲಿ ನೀರಜ್ ಕೈತಪ್ಪಿದ ಡೈಮಂಡ್ ಲೀಗ್ ಟ್ರೋಫಿ
ಏಕೆಂದರೆ ನೀವು ಏನಾಗಿದ್ದೀರಿ ಎಂಬುದನ್ನು ನೀವು ನಂಬಬೇಕು ಮತ್ತು ಅದಕ್ಕೆ ಅಂಟಿಕೊಳ್ಳಬೇಕಿದೆ. ಗೆಲುವಿನ ನಂತರ ಬಂದ ಯಾವುದೇ ತಂಡವು ಯಾವಾಗಲೂ ಗೆಲ್ಲಬಹುದೆಂದು ಭಾವಿಸುತ್ತದೆ. ಆದರೆ, ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ನಡುವೆ ಸಾಕಷ್ಟು ವ್ಯತ್ಯಾಸವಿದ್ದು, ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತ ತಂಡ ಬಲಾಢ್ಯವಾಗಿದೆ. ಪಾಕಿಸ್ತಾನವನ್ನು ಸೋಲಿಸಿರುವುದರಿಂದ ಅವರು ನಮ್ಮ ವಿರುದ್ಧ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಅವರ ಸ್ಪಿನ್ ಬೌಲಿಂಗ್ ಚೆನ್ನಾಗಿದ್ದು, ಪರಿಸ್ಥಿತಿ ಸರಿಹೊಂದಿಸಬಹುದಾಗಿದೆ ಎಂದು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಸ್ ಸರಣಿಗೆ ಭಾರತ ತಂಡ ಈಗಾಗಲೇ ಚೆನ್ನೈನ ಚೆಪಾಕ್ ಅಂಗಳದಲ್ಲಿ ತಯಾರಿ ಆರಂಭಿಸಿದ್ದು, ಬಿಸಿಸಿಐ ಅನುಭವಿಗಳ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಪಾಕಿಸ್ತಾನವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧ ಗೆದ್ದು ಬೀಗಬೇಕೆಂಬ ಹಂಬಲದೊಂದಿಗೆ ಕಠಿಣ ಅಭ್ಯಾಸ ನಡೆಸುತ್ತಿದೆ.