

Virat Kohli: ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಇದೀಗ ಫೈನಲ್ಗೆ ಪಂಜಾಬ್ ಕಿಂಗ್ಸ್ ಎಂಟ್ರಿ ಕೊಟ್ಟಿದೆ. ಐಪಿಎಲ್ 18ನೇ ಆವೃತ್ತಿಯ ಕಡೆಯ ಪಂದ್ಯದಲ್ಲಿ ಚೊಚ್ಚಲ ಟ್ರೋಫಿಗಾಗಿ ಹೋರಾಡಲಿರುವ ಆರ್ಸಿಬಿ ಮತ್ತು ಪಂಜಾಬ್ ನಡುವೆ ಯಾವ ತಂಡ ದಾಖಲೆಯ ಗೆಲುವು ಸಾಧಿಸಿ, 18ನೇ ಆವೃತ್ತಿಯ ಚೊಚ್ಚಲ ಟ್ರೋಫಿ ಎತ್ತಿಹಿಡಿಯಲಿದೆ ಎಂಬುದೇ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ರೋಚಕ ಹಾಗೂ ಕೌತುಕದ ಪ್ರಶ್ನೆ.
ಐಪಿಎಲ್ ಟೂರ್ನಿ ಆರಂಭಗೊಂಡ ಮೊದಲ ದಿನದಿಂದಲೂ ಸತತವಾಗಿ ಅದ್ಭುತ ಆಲ್ರೌಂಡ್ ಪ್ರದರ್ಶನ ಕೊಟ್ಟು, ಇದೀಗ ಫೈನಲ್ ಹಂತ ತಲುಪಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತು ರಜತ್ ಪಟೀದಾರ್ ನಾಯಕತ್ವದ ಆರ್ಸಿಬಿ ತಂಡಗಳು ಚೊಚ್ಚಲ ಕಪ್ಗಾಗಿ ಸೆಣಸಲು ಸಜ್ಜಾಗಿವೆ. ಇದು ಆಟಗಾರರಿಗಿಂತ ಅಭಿಮಾನಿಗಳಲ್ಲಿ ರೋಮಾಂಚಕ ಕ್ಷಣವನ್ನಾಗಿ ಮಾಡಿದೆ. ಅದರಲ್ಲೂ ಆರ್ಸಿಬಿ ಫ್ರಾಂಚೈಸಿಯ ಕಟ್ಟ ಅಭಿಮಾನಿ ಬಳಗಕ್ಕೆ ಇದು ಭಾವುಕ ಕ್ಷಣ ಎಂದರೆ ಖಂಡಿತ ತಪ್ಪಾಗಲಾರದು.
ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ, ತಮ್ಮ ಹೆಸರಿಗೆ ಐತಿಹಾಸಿಕ ದಾಖಲೆಗಳನ್ನೇ ಸೇರಿಸಿಕೊಂಡಿದ್ದಾರೆ. 2008ರಿಂದ ಒಂದೇ ಫ್ರಾಂಚೈಸಿಗೆ ಆಡಿರುವ ಏಕೈಕ ಆಟಗಾರ ಕೊಹ್ಲಿ ಮಾತ್ರ ಎಂಬುದು ಅಭಿಮಾನಿಗಳ ಉತ್ಸಾಹ, ಅಭಿಮಾನಕ್ಕೆ ಹಿಡಿದ ಕನ್ನಡಿ. ದಾಖಲೆಗಳ ಸರದಾರನಾಗಿ ಮಿಂಚಿರುವ ಕಿಂಗ್ ಕೊಹ್ಲಿ, ಈ ವರ್ಷವು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಅತ್ಯಧಿಕ ರನ್ಗಳನ್ನು ಕಲೆಹಾಕಿದ್ದಾರೆ. 18ನೇ ವರ್ಷ, 18ನೇ ಐಪಿಎಲ್ ಲೀಗ್, ಜೆರ್ಸಿ ನಂ.18, ಈ ವರ್ಷ ಆರ್ಸಿಬಿ ಪರ ಚೊಚ್ಚಲ ಕಪ್ ಎತ್ತಿಹಿಡಿಯಬೇಕು ಎಂಬುದೇ ಸದ್ಯ ಫ್ಯಾನ್ಸ್ಗಳ ಪ್ರಾರ್ಥನೆ, ಆಶಯ, ಮಹಾದಾಸೆ.
ಜೆರ್ಸಿ ನಂ.18 ಎಂದರೆ ಅಭಿಮಾನದ ಹೊಳೆ ಹರಿಸುವ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಫ್ಯಾನ್ಸ್, 18ನೇ ಆವೃತ್ತಿಯ ಚೊಚ್ಚಲ ಕಪ್ಗೆ ಮುತ್ತಿಡಬೇಕು ಎಂದು ದೇವರ ಮೊರೆ ಹೋಗಿದ್ದಾರೆ. ಈ ಮಧ್ಯೆ ಜೂನ್.03ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೂ, ವಿರಾಟ್ ಕೊಹ್ಲಿ ಜೆರ್ಸಿ ನಂ.18ಕ್ಕೂ ಒಂದು ಬಲವಾದ ಗಂಟು-ನಂಟು ಇದೆ. ಹೇಗೆ ಅಂತೀರಾ? ಹೀಗಿದೆ ನೋಡಿ ಆ ಲೆಕ್ಕಾಚಾರ.
ಇದೇನಾದರೂ ನಿಜವಾದರೆ ಕೊಹ್ಲಿಗೆ 18ರ ನಂಬರ್ ಲಕ್ಕಿ ಅನ್ನೋದು ಸಾಬೀತಾಗಲಿದೆ. ಅಭಿಮಾನಿಗಳ ಆಶಯ ಕೂಡ ಸತ್ಯವಾಗಲಿದೆ. ಒಟ್ಟಿನಲ್ಲಿ ಫೈನಲ್ ಆರ್ಸಿಬಿ ಗೆದ್ದು, ಚೊಚ್ಚಲ ಟ್ರೋಫಿ ಕೊಹ್ಲಿ ಕೈಸೇರಲಿ ಎಂಬುದೇ ಫ್ಯಾನ್ಸ್ ಮನದಾಸೆ.