ಭಾರತೀಯರೆಲ್ಲ ಏಕೆ ಹೀಗೆ? ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ ವಿದೇಶಿ ಯುವಕನ ಈ ಮಾತು...Indians

Indians
Published on

Indians : ಭಾರತೀಯ ಬೀಚ್‌ಗೆ ಭೇಟಿ ನೀಡಿದ ವಿದೇಶಿ ಯುವಕನ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ಯುವಕ ತನ್ನ ಇನ್​ಸ್ಟಾಗ್ರಾಂ ವೀಡಿಯೊದಲ್ಲಿ ತಾನು ಮೊದಲ ಬಾರಿಗೆ ಭಾರತೀಯ ಬೀಚ್‌ಗೆ ಭೇಟಿ ನೀಡಿದ್ದು, ನಿಜಕ್ಕೂ ಇದು ಶಾಕಿಂಗ್ ಎನಿಸಿತು ಎಂದಿದ್ದಾನೆ.

ವೈರಲ್​ ವಿಡಿಯೋವನ್ನು 'georgebxckley' ಹೆಸರಿನ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನನ್ನ ಭಾರತ ಪ್ರವಾಸದ ಸಮಯದಲ್ಲಿ ನಾನು ಮೊದಲ ಬೀಚ್ ತಲುಪಿದೆ. ಆದರೆ, ಇಲ್ಲಿ ಯಾರೂ ಟಾಪ್‌ಲೆಸ್ ಆಗಿಲ್ಲ. ಇಲ್ಲಿ ಎಲ್ಲರೂ ಸಂಪೂರ್ಣವಾಗಿ ಬಟ್ಟೆ ಧರಿಸಿದ್ದಾರೆ. ಏಕೆ ಎಂದು ನನಗೆ ಅದು ಅರ್ಥವಾಗುತ್ತಿಲ್ಲ. ನಾನು ತಮಾಷೆ ಮಾಡುತ್ತಿಲ್ಲ. ಇಲ್ಲಿ ಸುಮಾರು 100 ಜನರಿದ್ದಾರೆ. ಇಬ್ಬರು ಯುವಕರು ಮಾತ್ರ ಶರ್ಟ್‌ಲೆಸ್ ಆಗಿದ್ದಾರೆ. ಉಳಿದವರೆಲ್ಲರೂ ಸಂಪೂರ್ಣವಾಗಿ ಬಟ್ಟೆ ಧರಿಸಿದ್ದಾರೆ ಎಂದು ಯುವಕ ವಿಡಿಯೋದಲ್ಲಿ ಹೇಳಿದ್ದಾನೆ.

ಅವರೆಲ್ಲರನ್ನೂ ನೋಡಿ ಇಲ್ಲಿ ಶರ್ಟ್ ಬಿಚ್ಚುವುದರಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದೆನಿಸಿತು ಎಂದು ಆ ಯುವಕ ಹೇಳಿದ್ದಾನೆ. ಕೊನೆಗೆ ಆ ಯುವಕ ತನ್ನ ಶರ್ಟ್ ಬಿಚ್ಚಿ ಸಮುದ್ರಕ್ಕೆ ಹೋಗುತ್ತಾನೆ. ಈಗಾಗಲೇ ಅನೇಕ ಜನರು ವಿಡಿಯೋ ನೋಡಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ ಮತ್ತು ಲೈಕ್ ಮಾಡುತ್ತಿದ್ದಾರೆ. ಇದು ಭಾರತದ ಸಂಸ್ಕೃತಿ ಮತ್ತು ಇಲ್ಲಿನ ಜನರು ಬಟ್ಟೆ ಧರಿಸಿ ಬೀಚ್‌ಗೆ ಹೋಗುತ್ತಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಇದು ಭಾರತ ಸಹೋದರ, ಇಲ್ಲಿ ಯಾರೂ ತಮ್ಮ ದೇಹವನ್ನು ತೋರಿಸುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದರೆ, ಮತ್ತೊಬ್ಬ ನೆಟ್ಟಿಗ ನಮ್ಮ ದೇಶದಲ್ಲಿ ಸೂರ್ಯ ತುಂಬಾ ಪ್ರಕಾಶಮಾನವಾಗಿರುತ್ತಾನೆ. ಆದ್ದರಿಂದ, ನಾವು ಸೂರ್ಯನ ಬೆಳಕನ್ನು ನೋಡಲು ಸಮುದ್ರಕ್ಕೆ ಹೋಗುವುದಿಲ್ಲ ಎಂದಿದ್ದಾನೆ. ನೀವು ನಿಮ್ಮ ಫೋನ್ ಮತ್ತು ಬ್ಯಾಗ್ ಅನ್ನು ಬೀಚ್‌ನಲ್ಲಿ ಬಿಟ್ಟರೆ, ಅವುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಇನ್ನೊಬ್ಬ ಕಾಮೆಂಟ್​ ಮಾಡಿದ್ದಾನೆ.

ವೈರಲ್ ವಿಡಿಯೋದಲ್ಲಿರುವ ವಿದೇಶಿ ಯುವಕ ಹೇಳಿದ್ದನ್ನು ಕೇಳಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net