

Preity Zinta: ಐಪಿಎಲ್ 18ನೇ ಆವೃತ್ತಿಯ ಕೊನೆ ಹಂತಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದ್ದು, ಫೈನಲ್ ಸಮರದಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮತ್ತೆ ಮುಖಾಮುಖಿಯಾಗಲಿವೆ. 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆ ಎಂಟ್ರಿ ಕೊಟ್ಟಿರುವ ಕೊಹ್ಲಿ ಪಡೆ ಒಂದೆಡೆಯಾದರೆ, ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿರುವ ಪಂಜಾಬ್ ಮತ್ತೊಂದೆಡೆ. ಎರಡೂ ತಂಡಗಳಿಗೂ ಇದು ಚೊಚ್ಚಲ ಐಪಿಎಲ್ ಟ್ರೋಫಿ ಎಂಬುದು ಗಮನಾರ್ಹ.
18ನೇ ಆವೃತ್ತಿ ಪೂರ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಪಂಜಾಬ್ ಕಿಂಗ್ಸ್, ಇದೀಗ ಫೈನಲ್ನಲ್ಲಿ ಆರ್ಸಿಬಿ ಎದುರು ಗೆದ್ದು, ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುತ್ತಿಡುವ ಹೆಬ್ಬಯಕೆಯನ್ನು ಹೊಂದಿದೆ. ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದ್ದು, ಗೆಲುವಿಗಾಗಿ ಪ್ರಾರ್ಥನೆ, ಶುಭಹಾರೈಕೆಗಳು ಜೋರಾಗಿವೆ.
ಇನ್ನು ಈ ಸಂದರ್ಭದಲ್ಲಿ ಪ್ರೀತಿ ಜಿಂಟಾ ಸಹ ಒಡೆತನದ ಪಂಜಾಬ್ ಕಿಂಗ್ಸ್ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದ ಹಳೆಯ ಟ್ವೀಟ್ ಇದೀಗ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. 2014ರಲ್ಲಿ "ಜಿಂಟಾ ತಂಡ ಗೆದ್ದಿತೇ?" ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸಲ್ಮಾನ್ ಪೋಸ್ಟ್ ಹಂಚಿಕೊಂಡಿದ್ದರು. 11 ವರ್ಷಗಳ ಹಳೆಯ ಟ್ವೀಟ್ ಈಗ ವೈರಲ್ ಆಗಿರುವುದು ಸದ್ಯ ಹಲವರ ಅಭಿಪ್ರಾಯಗಳಿಗೆ ಕಾರಣವಾಗಿದೆ. ಒಂದಷ್ಟು ನೆಟ್ಟಿಗರು, "ಫೈನಲ್ನಲ್ಲಿ ಜಿಂಟಾ ತಂಡ ಗೆದ್ದಿದೆ ಭಾಯ್" ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).