

ನವದೆಹಲಿ: ದೆಹಲಿ ಬಾರ್ ಅಸೋಸಿಯೇಷನ್ ತನ್ನ ಸದಸ್ಯರಿಗೆ ಬೇಸಿಗೆಯಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಕಡ್ಡಾಯ ಕಪ್ಪು ಕೋಟ್ಗಳನ್ನು ಧರಿಸುವುದರಿಂದ ವಿನಾಯಿತಿ ನೀಡಿದೆ. ಬೇಸಿಗೆಯ ತಿಂಗಳುಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಕೀಲರಿಗೆ ಅಗತ್ಯವಾದ ಸೌಲಭ್ಯ ನೀಡುವ ಸಲುವಾಗಿ, ದೆಹಲಿ ಬಾರ್ ಅಸೋಸಿಯೇಷನ್ ಮೇ 16 ರಿಂದ ಸೆಪ್ಟೆಂಬರ್ 30 ರವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರು ತಮ್ಮ ಸಾಂಪ್ರದಾಯಿಕ ಉಡುಪಿನ ಕಪ್ಪು ಕೋಟ್ಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಘೋಷಿಸಿದೆ.
1961 ರ ವಕೀಲರ ಕಾಯ್ದೆಯ ಸೆಕ್ಷನ್ 49 (1) (gg) ಅಡಿಯಲ್ಲಿ ನಿಯಮದಲ್ಲಿನ ತಿದ್ದುಪಡಿಯ ಪ್ರಕಾರ, ಬೇಸಿಗೆಯಲ್ಲಿ ಅಂದರೆ ಮೇ 16 ರಿಂದ ಸೆಪ್ಟೆಂಬರ್ 30 ರವರೆಗೆ ವಕೀಲರು ಕಪ್ಪು ಕೋಟು ಧರಿಸುವುದರಿಂದ ವಿನಾಯಿತಿ ಪಡೆದಿದ್ದಾರೆ ಎಂದು ಎಲ್ಲಾ ಸದಸ್ಯರಿಗೆ ತಿಳಿಸಲಾಗಿದೆ ಎಂದು ಬಾರ್ ಅಸೋಸಿಯೇಷನ್ ಮೇ 24 ರ ಸುತ್ತೋಲೆಯಲ್ಲಿ ತಿಳಿಸಿದೆ.
ರಾಜಧಾನಿಯಲ್ಲಿ ಬಿಸಿಲಿನ ನಡುವೆಯೂ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರಿಗೆ ಒಂದು ದೊಡ್ಡ ಪರಿಹಾರವಾಗಿ, ದೆಹಲಿ ಬಾರ್ ಅಸೋಸಿಯೇಷನ್ ಈ ಆದೇಶ ಹೊರಡಿಸಿದೆ.
ಈ ನಿಬಂಧನೆಯು ಯಾವುದೇ ನ್ಯಾಯಾಲಯ ಅಥವಾ ನ್ಯಾಯಮಂಡಳಿಯ ಮುಂದೆ ಹಾಜರಾಗುವ ವಕೀಲರ ಉಡುಪಿನ ಬಗ್ಗೆ ನಿಯಮಗಳನ್ನು ರೂಪಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಅಧಿಕಾರ ನೀಡುತ್ತದೆ. ಸದಸ್ಯರು ದೆಹಲಿ ಹೈಕೋರ್ಟ್ನ ಅಧೀನದಲ್ಲಿರುವ ನ್ಯಾಯಾಲಯಗಳಲ್ಲಿ ಕಪ್ಪು ಕೋಟು ಧರಿಸದೆ ಹಾಜರಾಗಲು ಸ್ವತಂತ್ರರು. ಅಂದಹಾಗೆ ವಕೀಲರಿಗೆ ಕಡ್ಡಾಯವಾಗಿರುವ ಡ್ರೆಸ್ ಕೋಡ್ನ ಇತರ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ವಿಕಾಸ್ ಗೋಯಲ್ ಸಹಿ ಮಾಡಿದ ನೋಟಿಸ್ನಲ್ಲಿ ತಿಳಿಸಿದ್ದಾರೆ.
(ಏಜೆನ್ಸೀಸ್)