More

    ಪಂದ್ಯದ ವೇಳೆ ಶಾರುಖ್​ ಖಾನ್ ಚಲೆಯಾ ಹಾಡಿಗೆ ಹೆಜ್ಜೆ​ ಹಾಕಿದ ವಿರಾಟ್​ ಕೊಹ್ಲಿ; ವಿಡಿಯೋ ವೈರಲ್

    ಕಲ್ಕತ್ತಾ: ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯವು ಕ್ರೀಡಾಭಿಮಾನಿಗಳ ಸಂಭ್ರಮವನ್ನು ಡಬಲ್​ ಮಾಡಿದ್ದು, 243 ರನ್​ಗಳ ಭರ್ಜರಿ ಜಯಗಳಿಸುವ ಮೂಲಕ ಟೀಂ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದೆ.

    ವಿಸೇಷವಾಗಿ ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ಸಿಡಿಸಿ ತಮ್ಮ 35ನೇ ಜನ್ಮದಿನವನ್ನು ಸ್ಮರಣೀಯವಾಗಿರಿಸಿಕೊಂಡಿದ್ದಾರೆ. ಇನ್ನು ಫೀಲ್ಡಿಂಗ್ ವೇಳೆ ವಿರಾಟ್ ಕೊಹ್ಲಿ, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಚಲೆಯಾ ಹಾಡನ್ನು ಹಾಡಿ, ಶಾರುಖ್ ಸಿಗ್ನೇಚರ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ ಕ್ರಿಕೆಟ್​ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಕಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶತಕದ ನೆರವಿನಿಂದ ಭಾರತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 326 ರನ್​ಗಳಿಸಿತ್ತು. ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್​ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತ ಬೌಲರ್​ಗಳು ಎದುರಾಳಿ ತಂಡವನ್ನು 83 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಜನ್ಮದಿನದಂದೇ ಕ್ರಿಕೆಟ್​ ದಿಗ್ಗಜನ ದಾಖಲೆ ಸರಿಗಟ್ಟಿದ್ದ ಕಿಂಗ್​ ಕೊಹ್ಲಿ

    ಇದರ ನಡುವೆ ಸ್ಲಿಪ್ ಫೀಲ್ಡಿಂಗ್‌ನಲ್ಲಿದ್ದ ವಿರಾಟ್ ಕೊಹ್ಲಿ ಚಲೆಯಾ ಹಾಡುನ್ನು ಗುನುಗುತ್ತಿರುವ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಹಾಡು ಹಾಡಿದ್ದು ಮಾತ್ರವಲ್ಲ, ಶಾರುಖ್ ಖಾನ್ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಪಂದ್ಯದ ನಡುವೆ ಡ್ಯಾನ್ಸ್ ಮಾಡುವುದು ಕೊಹ್ಲಿಗೆ ಮೊದಲಲ್ಲ. ಹಲವು ಬಾರಿ ಈ ರೀತಿ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಶಾರುಖ್ ಸಿಗ್ನೇಚರ್ ಸ್ಟೆಪ್ಸ್ ಮೂಲಕ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದ್ದಾರೆ.

    ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ 1,500 ರನ್ ಪೂರೈಸಿದ್ದಾರೆ. 2023ರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಅನ್ನೋ ದಾಖಲೆಯನ್ನೂ ವಿರಾಟ್​ ಕೊಹ್ಲಿ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts