More

    ಜನ್ಮದಿನದಂದೇ ಕ್ರಿಕೆಟ್​ ದಿಗ್ಗಜನ ದಾಖಲೆ ಸರಿಗಟ್ಟಿದ್ದ ಕಿಂಗ್​ ಕೊಹ್ಲಿ

    ಕಲ್ಕತ್ತಾ: ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಶತಕ ಬಾರಿಸುವ ಮೂಲಕ ಕ್ರಿಕೆಟ್​ ದಿಗ್ಗಜನ ದಾಖಲೆ ಸರಿಗಟ್ಟಿ ತಮ್ಮ ಜನ್ಮದಿನವನ್ನು ಸ್ಮರಣೀಯವಾಗಿರಿಕೊಂಡಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಈ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದಲ್ಲದೆ ಅನೇಕ ದಾಖಲೆಗಳನ್ನು ವಿರಾಟ್​ ಕೊಹ್ಲಿ ಸರಿಗಟ್ಟಿದ್ದಾರೆ.

    ಏಕದಿನ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಅತಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ್​ ಸಂಗಕ್ಕರ ಅವರನ್ನು ಹಿಂದಿಕ್ಕಿದ್ದರು. ಭಾರತದ ಪರ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ 1,500 ನರ್​ ಬಾರಿಸಿದ ಮೂರನೇ ಮತ್ತು ಎರಡನೇ ಭಾರತೀಯ ಬ್ಯಾಟ್ಸ್​ಮನ್​ ಎನ್ನಿಸಿಕೊಂಡರು. ಭಾರತದ ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್ ತೆಂಡುಲ್ಕರ್ (45 ಪಂದ್ಯಗಳು, 2278 ರನ್), ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (46 ಪಂದ್ಯ, 1743 ರನ್) ಮೊದಲೆರಡು ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ಪ್ರತಿಮಾ ಕೊಲೆ ಪ್ರಕರಣ; ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ

    ವಿರಾಟ್​-ಶ್ರೇಯಸ್​ ಮಿಂಚು

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ವಿರಾಟ್​ ಕೊಹ್ಲಿ (101 ರನ್, 121 ಎಸೆತ, 10 ಬೌಂಡರಿ), ಶ್ರೇಯಸ್​ ಅಯ್ಯರ್ (77 ರನ್, 87 ಎಸೆತ, 7 ಬೌಂಡರಿ, 2 ಸಿಕ್ಸರ್) 134 ರನ್​ಗಳ ಜತೆಯಾಟದ ಫಲವಾಗಿ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 326 ರನ್​ ಗಳಿಸಿದೆ.

    ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ (10-1-48-1), ಕೇಶವ್ ಮಹಾರಾಜ್ (10-0-30-0), ತರ್ಬೇಜ್​ ಶಂಶಿ (10-0-72-1), ಮಾರ್ಕೋ ಜೇನ್​ಸನ್​ (9.4-0-94-1), ಲುಂಗಿ ಎನ್​​ಗಿಡಿ (8.2-0-63-1), ಏಡೆನ್​ ಮಾರ್ಕ್​ರಾಮ್​ (2-0-17-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts