More

  ರಾಜಸ್ಥಾನ ವಿಧಾನಸಭೆ ಚುನಾವಣೆ; ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

  ಜೈಪುರ: ಮುಂದಿನ ಕೆಲವೇ ದಿನಗಳ್ಲಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಬಿಜೆಪಿ ಭಾನುವಾರ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದೆ.

  ಸಿವಿಲ್ ಲೈನ್ಸ್‌ನಿಂದ ಗೋಪಾಲ್ ಶರ್ಮಾ ಮತ್ತು ಆದರ್ಶ ನಗರದಿಂದ ರವಿ ನಯ್ಯರ್ ಎಂಬುವವರಿಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಿದ್ದು, ಮಾವ್ಲಿ (ಉದಯಪುರ) ಕ್ಷೇತ್ರದಿಂದ ಕೆ.ಜಿ. ಪಲಿವಾಲ್​ ಎಂಬುವವರಿಗೆ ಟಿಕೆಟ್​ ನೀಡಲಾಗಿದೆ.

  ಇದನ್ನೂ ಓದಿ: ರಾಜಸ್ಥಾನ ಚುನಾವಣೆ| 23 ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಗೆಹ್ಲೋಟ್​ ಬೆಂಬಲಿಗರಿಗೆ ಶಾಕ್

  ಇನ್ನುಳಿದಂತೆ ಹನುಮಾನ್​ಗಢದಿಂದ ಅಮಿತ್ ಚೌಧರಿ, ಕಿಶನ್‌ಪೋಲ್‌ನಿಂದ ಚಂದ್ರಮೋಹನ್ ಬಟ್ವಾಡ, ಭರತ್‌ಪುರದಿಂದ ವಿಜಯ್ ಬನ್ಸಾಲ್, ಸರ್ದರ್ಶಹರ್‌ನಿಂದ ಮಾಜಿ ಶಾಸಕ ರಾಜ್‌ಕುಮಾರ್ ರಿನ್ವಾ, ಕೋಟಾ ಉತ್ತರದಿಂದ ಪ್ರಹ್ಲಾದ್ ಗುಂಜಾಲ್, ಶೇರ್‌ಗಢದಿಂದ ಬಾಬು ಸಿಂಗ್ ರಾಥೋಡ್​ಗೆ ಟಿಕೆಟ್​ ನೀಡಲಾಗಿದೆ. ಈ ಮೂಕಕ ಬಿಜೆಪಿ 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆ ಚುನಾವಣೆಗೆ 198 ಅಭ್ಯರ್ಥಿಗಳನ್ನು ಘೋಷಿಸಿದ್ದು, ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಬಾಕಿ ಉಳಿಸಿಕೊಂಡಿದೆ.

  ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  See also  ಆ.25ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts